ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಡಿಪಿ ಅಂದಾಜು ಅಭಿವೃದ್ಧಿ ದರ ಶೇ.7.7ಕ್ಕೆ ಇಳಿಕೆ
ಕಳೆದ ಹಣಕಾಸು ವರ್ಷದಲ್ಲಿ ಶೇ.ಒಂಭತ್ತರಷ್ಟಿದ್ದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ಅಭಿವೃದ್ಧಿಯ ಅಂದಾಜು ದರವನ್ನು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯು ಶೇ.7.7ಕ್ಕೆ ಇಳಿಸಿದೆ. ಇದರೊಂದಿಗೆ ಕೈಗಾರಿಕಾ ಮತ್ತು ಕೃಷಿ ಅಭಿವೃದ್ಧಿ ಅಂದಾಜು ದರವೂ ಕುಂಠಿತಗೊಂಡಿದೆ.

ಕೈಗಾರಿಕಾ ಉತ್ಪಾದನೆ(ಐಐಪಿ) ಅಂಕಿಅಂಶಗಳ ಅನುಸಾರ, ಕಳೆದ ಹಣಕಾಸು ವರ್ಷದಲ್ಲಿ ಶೇ.9.1ರಷ್ಟಿದ್ದ ಆರ್ಥಿಕ ಅಭಿವೃದ್ಧಿ ದರವು ಶೇ.ಎಂಟರ ಕೆಳಗಿಳಿಯಲಿದೆ ಎಂದು ಆರ್ಥಿಕತಜ್ಞರು ಅಂದಾಜಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಕ್ರಮಗಳು ಸೇರಿದಂತೆ ಬಿಗಿ ಆರ್ಥಿಕ ಕ್ರಮಗಳು ಆರ್ಥಿಕ ಅಭಿವೃದ್ಧಿ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಕಂಡುಬಂದಿದೆ.

ಬಿಗಿ ಹಣಕಾಸು ನಿಲುವು ಮತ್ತು ಸಂಘಟಿತ ನೀತಿಯ ಮೂಲಕ ಮಾರ್ಚ್ 2009ರ ವೇಳೆಗೆ ಹಣದುಬ್ಬರವು ಶೇ.8-9ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಇಎಸಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮತ್ತಷ್ಟು
ಬಿಪಿಎಲ್ ಕುಟುಂಬಗಳಿಗೆ ಮಾತ್ರವೇ ಸಬ್ಸಿಡಿ: ಚತುರ್ವೇದಿ ಸಮಿತಿ
ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಜ್ಯೋತಿಷ್ಯ ಮಾಲ್
ಸಮಾನತೆ ಉತ್ತೇಜನ ಡಬ್ಲ್ಯೂಟಿಒ ಗುರಿಯಾಗಲಿ: ನಾಥ್
ಸಿಂಗಾಪುರ್ ಏರ್‌ಲೈನ್‌ಗೆ ಉತ್ತಮ ಏರ್‌ಲೈನ್ ಪ್ರಶಸ್ತಿ
ಕೈಗಾರಿಕಾ ಅಭಿವೃದ್ಧಿ ದರ ಶೇ.5.4ಕ್ಕೇರಿಕೆ
ಕಚ್ಚಾವಸ್ತುಗಳ ಪ್ರಭಾವದಲ್ಲಿ ಸ್ಟೀಲ್ ಬೆಲೆ: ರತನ್ ಟಾಟಾ