ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಖಂ ತೈಲ ಬೆಲೆಯಲ್ಲಿ ಇಳಿಕೆ ಇಲ್ಲ: ದೇವೊರಾ
ಜಾಗತಿಕ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಉಂಟಾಗಿದ್ದರೂ, ಭಾರತದ ದೇಶೀಯ ಇಂಧನ ಬೆಲೆಯನ್ನು ಕಡಿತಗೊಳಿಸುವ ಯಾವುದೇ ಅವಕಾಶವಿಲ್ಲ ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವೊರಾ ಸ್ಪಷ್ಟಪಡಿಸಿದ್ದಾರೆ.

ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಉಂಟಾಗುತ್ತಿರುವುದು ಸಂತೋಷದ ಸೂಚನೆಯೇ ಆಗಿದೆ. ಇದು ಸ್ವಾಗತಕಾರಿ ಬೆಳವಣಿಗೆಯಾಗಿದೆ. ಆದರೆ, ದೇಶೀಯ ಚಿಲ್ಲರೆ ಮಾರಾಟ ಬೆಲೆಯ ಇಳಿಕೆಯ ಯಾವುದೇ ಸಂಭವವಿಲ್ಲ ಎಂದು ದೇವೊರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ತಿಂಗಳಲ್ಲಿ ಬ್ಯಾರಲ್‌ಗೆ 147 ಡಾಲರ್‌ಗೆ ತಲುಪಿದ್ದ ಕಚ್ಚಾತೈಲ ಬೆಲೆಯು ಪ್ರಸಕ್ತ ವಾರದಲ್ಲಿ ಬ್ಯಾರಲ್‌ಗೆ 113 ಡಾಲರ್‌ಗೆ ತಲುಪಿತ್ತು.

ಜಾಗತಿಕ ತೈಲ ಬೆಲೆಯಲ್ಲಿ ಇಳಿಕೆ ಉಂಟಾಗಿದ್ದರೂ, ಪ್ರಮುಖ ರಖಂ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪನಿಗಳ ನಷ್ಟದ ಪ್ರಮಾಣದಲ್ಲಿ ಯಾವುದೇ ಇಳಿಕೆ ಉಂಟಾಗಿಲ್ಲ. ಕಂಪನಿಗಳ ನಷ್ಟವು ಮುಂದುವರಿಯುತ್ತಿರುವಾಗ ಹೇಗೆ ತಾನೆ ರಖಂ ಬೆಲೆಯನ್ನು ಇಳಿಸಲು ಸಾಧ್ಯ ಎಂದು ದೇವೊರಾ ಹೇಳಿದ್ದಾರೆ.
ಮತ್ತಷ್ಟು
ಜಿಡಿಪಿ ಅಂದಾಜು ಅಭಿವೃದ್ಧಿ ದರ ಶೇ.7.7ಕ್ಕೆ ಇಳಿಕೆ
ಬಿಪಿಎಲ್ ಕುಟುಂಬಗಳಿಗೆ ಮಾತ್ರವೇ ಸಬ್ಸಿಡಿ: ಚತುರ್ವೇದಿ ಸಮಿತಿ
ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಜ್ಯೋತಿಷ್ಯ ಮಾಲ್
ಸಮಾನತೆ ಉತ್ತೇಜನ ಡಬ್ಲ್ಯೂಟಿಒ ಗುರಿಯಾಗಲಿ: ನಾಥ್
ಸಿಂಗಾಪುರ್ ಏರ್‌ಲೈನ್‌ಗೆ ಉತ್ತಮ ಏರ್‌ಲೈನ್ ಪ್ರಶಸ್ತಿ
ಕೈಗಾರಿಕಾ ಅಭಿವೃದ್ಧಿ ದರ ಶೇ.5.4ಕ್ಕೇರಿಕೆ