ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲಮನ್ನಾ: ಸೆಪ್ಟೆಂಬರ್ ಅಂತ್ಯದೊಳಗೆ 25,000 ಕೋ.ರೂ.
ರೈತರ ಸಾಲಮನ್ನಾ ಯೋಜನೆ ಪರವಾಗಿ, ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಸರಕಾರವು ಮೊದಲ ಕಂತಿನ 25,000 ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ನೀಡಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ 25,000 ಕೋಟಿ ರೂಪಾಯಿಯನ್ನು ಸರಕಾರವು ಬ್ಯಾಂಕುಗಳಿಗೆ ನೀಡಲಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಪಿಎಸ್‌ಯು ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ, ಸಾಲಮನ್ನಾ ಯೋಜನೆಯ ಕುರಿತಾಗಿ 1.18 ಲಕ್ಷ ರೈತರಿಂದ ದೂರುಗಳು ಬಂದಿದ್ದರೂ, ಇದರಿಂದ ಪ್ರಯೋಜನ ಪಡೆದವರ ಸಂಖ್ಯೆಯು 3.64 ಕೋಟಿಯಷ್ಟಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

ಅದಾಗ್ಯೂ, ಈ ದೂರುಗಳನ್ನು ಪರಿಗಣಿಸಲಾಗಿದ್ದು, ಆಗಸ್ಟ್ 31ರೊಳಗೆ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ದೂರುಗಳು, ಸಲಹಾಸೂತ್ರದ ಅಪಾರ್ಥದಿಂದಾಗಿ ಉಂಟಾಗಿವೆ ಎಂದು ಹಣಕಾಸು ಸಚಿವರು ತಿಳಿಸಿದ್ದು, ವ್ಯಕ್ತಿಗತವಾಗಿ ಸಲಹಾಸೂತ್ರವನ್ನು ವಿವರಿಸಿದಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದಿದ್ದಾರೆ.
ಮತ್ತಷ್ಟು
ಬಡ್ಡಿದರಗಳು ಗರಿಷ್ಠ ಮಟ್ಟದಲ್ಲಿವೆ: ಎಸ್‌ಬಿಐ
ರಖಂ ತೈಲ ಬೆಲೆಯಲ್ಲಿ ಇಳಿಕೆ ಇಲ್ಲ: ದೇವೊರಾ
ಜಿಡಿಪಿ ಅಂದಾಜು ಅಭಿವೃದ್ಧಿ ದರ ಶೇ.7.7ಕ್ಕೆ ಇಳಿಕೆ
ಬಿಪಿಎಲ್ ಕುಟುಂಬಗಳಿಗೆ ಮಾತ್ರವೇ ಸಬ್ಸಿಡಿ: ಚತುರ್ವೇದಿ ಸಮಿತಿ
ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಜ್ಯೋತಿಷ್ಯ ಮಾಲ್
ಸಮಾನತೆ ಉತ್ತೇಜನ ಡಬ್ಲ್ಯೂಟಿಒ ಗುರಿಯಾಗಲಿ: ನಾಥ್