ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕದ ಎಚ್ಐವಿ ಪೀಡಿತರಿಗೆ ವಿಮಾ ಪಾಲಿಸಿ
ಭಾರತದಲ್ಲಿ ಮಿಲಿಯನ್‌ಗಟ್ಟಲೆ ಮಂದಿಯು ಎಚ್‌ಐವಿ ರೋಗ ಬಾಧಿತರಾಗಿದ್ದರೂ, ಈವರೆಗೂ ವಿಮಾ ಕಂಪನಿಗಳು ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದವು.

ಆದರೆ, ಉತ್ತಮ ಬೆಳವಣಿಗೆಯೆಂಬಂತೆ, 250 ಎಚ್‌ಐವಿ ಬಾಧಿತರಿಗಾಗಿ ಸಮೂಹ ಆರೋಗ್ಯ ವಿಮಾ ಯೋಜನೆಯನ್ನು ಬುಧವಾರ ಕರ್ನಾಟಕದಲ್ಲಿ ಪ್ರಾರಂಭಿಸಲಾಗಿದೆ. ಅಂತಾರಾಷ್ಟ್ರೀಯ ಅಭಿವೃದ್ಧಿಯ ಅಮೆರಿಕ ಸಂಸ್ಥೆ(ಯುಎಸ್ಎಐಡಿ) ಬೆಂಬಲದೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಭಾರತದಲ್ಲಿ ಎಚ್ಐವಿ ಮತ್ತು ಕ್ಷಯರೋಗವನ್ನು ಎದುರಿಸುವ ನಿಟ್ಟಿನಲ್ಲಿ ಖಾಸಗಿ-ಸರಕಾರಿ ಪಾಲುದಾರಿಕೆಯನ್ನು ನಿರ್ಮಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.

ಪಾಪ್ಯುಲರ್ ಸರ್ವೀಸ್ ಇಂಟರ್ನಾಶನಲ್(ಪಿಎಸ್ಐ) , ಎನ್‌ಜಿಒ, ಸ್ಟಾರ್ ಹೆಲ್ತ್ ಮತ್ತು ಪ್ರಮುಖ ವಿಮಾ ಕಂಪನಿ ಹಾಗೂ ಕರ್ನಾಟಕ ನೆಟ್ವರ್ಕ್ ಫಾರ್ ಪಾಸಿಟಿವ್ ಪೀಪಲ್ಸ್‌(ಕಿಎನ್‌ಪಿ+)ನೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ವೈಯಕ್ತಿಕವಾಗಿ ಈ ಯೋಜನೆಯು ದೊರಕುವುದಿಲ್ಲ. ಸುಮಾರು 300 ಜನರ ಗುಂಪಿಗೆ ಈ ಯೋಜನೆಯನ್ನು ನೀಡಲಾಗುತ್ತದೆ. ಕರ್ನಾಟಕದ ಆರು ಜಿಲ್ಲೆಗಳಾದ ಬಳ್ಳಾರಿ, ಮಂಗಳೂರು, ಮಂಡ್ಯ, ಉಡುಪಿ, ಕೋಲಾರ ಮತ್ತು ಮೈಸೂರಿನ 250 ಅರ್ಜಿದಾರರಿಗೆ ಈ ಪಾಲಿಸಿಯನ್ನು ನೀಡಲಾಗಿದೆ.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು(ನ್ಯಾಕೋ) ಪ್ರಸಕ್ತ ವರ್ಷದಲ್ಲಿ 11,000 ಕೋಟಿ ರೂಪಾಯಿ ಬಜೆಟ್ ಹೊಂದಿದ್ದು, ಇದರಲ್ಲಿ 150 ಕೋಟಿಯನ್ನು ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ವ್ಯಯಿಸಲಾಗಿದೆ. ಹೆಚ್ಚಿನ ಎಚ್ಐವಿ ಪೀಡಿತರಿಗೆ ಇದರ ಪ್ರಯೋಜನ ಸಿಗಲು ಶ್ರಮಿಸಲಾಗುತ್ತಿದೆ ಎಂದು ನ್ಯಾಕೋದ ಪ್ರಧಾನ ನಿರ್ದೇಶಕ ಕೆ.ಸುಜಾತಾ ರಾವ್ ತಿಳಿಸಿದ್ದಾರೆ.
ಮತ್ತಷ್ಟು
ಸಾಲಮನ್ನಾ: ಸೆಪ್ಟೆಂಬರ್ ಅಂತ್ಯದೊಳಗೆ 25,000 ಕೋ.ರೂ.
ಬಡ್ಡಿದರಗಳು ಗರಿಷ್ಠ ಮಟ್ಟದಲ್ಲಿವೆ: ಎಸ್‌ಬಿಐ
ರಖಂ ತೈಲ ಬೆಲೆಯಲ್ಲಿ ಇಳಿಕೆ ಇಲ್ಲ: ದೇವೊರಾ
ಜಿಡಿಪಿ ಅಂದಾಜು ಅಭಿವೃದ್ಧಿ ದರ ಶೇ.7.7ಕ್ಕೆ ಇಳಿಕೆ
ಬಿಪಿಎಲ್ ಕುಟುಂಬಗಳಿಗೆ ಮಾತ್ರವೇ ಸಬ್ಸಿಡಿ: ಚತುರ್ವೇದಿ ಸಮಿತಿ
ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಜ್ಯೋತಿಷ್ಯ ಮಾಲ್