ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐ-ಎಸ್‌ಬಿಎಸ್ ವಿಲೀನಕ್ಕೆ ಅನುಮೋದನೆ
ಭಾರತೀಯ ಸ್ಟೇಟ್ ಬ್ಯಾಂಕ್‌ನೊಂದಿಗೆ ಸೌರಾಷ್ಟ್ರ ಬ್ಯಾಂಕ್ ವಿಲೀನಕ್ಕೆ ಹಣಕಾಸು ಸಚಿವಾಲಯವು ಅನುಮೋದನೆ ನೀಡಿದೆ ಎಂದು ಸ್ಟೇಟ್ ಬ್ಯಾಂಕ್ ತಿಳಿಸಿದೆ.

ಸೌರಾಷ್ಟ್ರ ಬ್ಯಾಂಕ್‌ನ್ನು ಸ್ವಾಧೀನಪಡಿಸಿಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಚಿವಾಲಯವು ಆದೇಶ ನೀಡಿದೆ ಎಂದು ಎಸ್‌ಬಿಐ ಹೇಳಿದೆ.

ಏನೇ ಆದರೂ, ಅಧಿಕೃತ ಗಜೆಟ್‌ನಲ್ಲಿ ಈ ವಿಲೀನದ ಜಾರಿ ದಿನಾಂಕವನ್ನು ನಮೂದಿಸಲಾಗಿಲ್ಲ ಎಂದು ಎಸ್‌ಬಿಐ ಸೂಚಿಸಿದೆ.

ಈ ತಿಂಗಳ ಪ್ರಾರಂಭದಲ್ಲಿ ಎಸ್‌ಬಿಐನೊಂದಿಗೆ ಎಸ್‌ಬಿಎಸ್ ವಿಲೀನಕ್ಕೆ ಕೇಂದ್ರ ಸಂಸತ್ ಅನುಮೋದನೆ ನೀಡಿತ್ತು. ಈ ಎರಡೂ ಬ್ಯಾಂಕುಗಳ ಆಡಳಿತ ಮಂಡಳಿಯು ಕಳೆದ ವರ್ಷವೇ ಇದಕ್ಕೆ ಒಪ್ಪಿಗೆ ಸೂಚಿಸಿತ್ತು.

ಸಂಸತ್ ಅನುಮೋದನೆಯ ನಂತರ ಹಣಕಾಸು ಸಚಿವಾಲಯವು ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರ ಕಾಯಿದೆ 1950ನ್ನು ರದ್ದುಗೊಳಿಸುವ ಮತ್ತು ಎಸ್‌ಬಿಐ ಸಹಾಯಕ ಕಾಯಿದೆ 1959ನ್ನು ತಿದ್ದುಪಡಿ ಮಾಡುವ ಪೂರ್ವತಯಾರಿಯನ್ನು ಪೂರ್ಣಗೊಳಿಸಿದೆ.

ಈ ವಿಲೀನದ ಅಂತಿಮ ಅನುಮೋದನೆಗಾಗಿ ಎಸ್‌ಬಿಐ ಸಹಾಯಕ ಬ್ಯಾಂಕ್ ತಿದ್ದುಪಡಿ ಮಸೂದೆಯನ್ನು ಸರಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತುತಪಡಿಸಲಿದೆ. ಈ ಪ್ರಸ್ತಾಪಿತ ಮಸೂದೆಯು, ಎಸ್‌ಬಿಐ ಸಹಾಯಕ ಕಾಯಿದೆ 1959ಯಿಂದ ಎಲ್ಲಾ ಎಸ್‌ಬಿಎಸ್ ಶಿಫಾರಸ್ಸುಗಳನ್ನು ಅಳಿಸಿ ಹಾಕುವುದು.
ಮತ್ತಷ್ಟು
ಕರ್ನಾಟಕದ ಎಚ್ಐವಿ ಪೀಡಿತರಿಗೆ ವಿಮಾ ಪಾಲಿಸಿ
ಸಾಲಮನ್ನಾ: ಸೆಪ್ಟೆಂಬರ್ ಅಂತ್ಯದೊಳಗೆ 25,000 ಕೋ.ರೂ.
ಬಡ್ಡಿದರಗಳು ಗರಿಷ್ಠ ಮಟ್ಟದಲ್ಲಿವೆ: ಎಸ್‌ಬಿಐ
ರಖಂ ತೈಲ ಬೆಲೆಯಲ್ಲಿ ಇಳಿಕೆ ಇಲ್ಲ: ದೇವೊರಾ
ಜಿಡಿಪಿ ಅಂದಾಜು ಅಭಿವೃದ್ಧಿ ದರ ಶೇ.7.7ಕ್ಕೆ ಇಳಿಕೆ
ಬಿಪಿಎಲ್ ಕುಟುಂಬಗಳಿಗೆ ಮಾತ್ರವೇ ಸಬ್ಸಿಡಿ: ಚತುರ್ವೇದಿ ಸಮಿತಿ