ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ,ಕೋಲ್ಕತ್ತಾ ವಿ.ನಿಲ್ದಾಣ ಮೇಲ್ದರ್ಜೆಗೆ ಅನುಮೋದನೆ
ಸುಮಾರು 3,750 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಲ್ಕತ್ತಾ ಮತ್ತು ಚೆನ್ನೈ ವಿಮಾನ ನಿಲ್ದಾಣ ಆಧುನೀಕರಣಕ್ಕೆ ಕೇಂದ್ರ ಸರಕಾರವು ಅನುಮೋದನೆ ನೀಡಿದ್ದು, ಈ ಯೋಜನೆಯು ಮೂರು ವರ್ಷದೊಳಗೆ ಪೂರ್ಣಗೊಳ್ಳಲಿದೆ.

ಡಿಎಂಕೆ ನೇತೃತ್ವದ ತಮಿಳುನಾಡು ಸರಕಾರ ಮತ್ತು ಪಶ್ಚಿಮ ಬಂಗಾಲದ ಎಡಪಕ್ಷಗಳ ಬೇಡಿಕೆಯನ್ವಯ ಸರಕಾರಿ ಸ್ವಾಮ್ಯದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ವಿಮಾನ ನಿಲ್ದಾಣಗಳ ಸಂಪೂರ್ಣ ಆಧುನೀಕರಣ ಮತ್ತು ಮೇಲ್ದರ್ಜೆ ಕಾರ್ಯಗಳು ನಡೆಯಲಿವೆ.

ಈ ಎರಡು ವಿಮಾನ ನಿಲ್ದಾಣಗಳನ್ನು ಮಾದರಿಯಾಗಿಸುವ ಮೂಲಕ, ಉನ್ನತ ಮಟ್ಟದ ವಿಮಾನ ನಿಲ್ದಾಣ ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದೊಂದಿಗೆ ಎಎಐ ಸ್ಪರ್ಧೆಗಿಳಿಯಬಹುದಾಗಿದೆ ಎಂದು ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೋಲ್ಕತ್ತಾ ವಿಮಾನನಿಲ್ದಾಣವು ಅಂದಾಜು 1,942.51 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಲಿದ್ದು, 1,808 ಕೋಟಿ ರೂಪಾಯಿ ವೆಚ್ಚದಲ್ಲಿ ಚೆನ್ನೈ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು. ಕೋಲ್ಕತ್ತಾ ಯೋಜನೆಯು 30 ತಿಂಗಳೊಳಗೆ ಪೂರ್ಣಗೊಳ್ಳಲಿದ್ದು, ಚೆನ್ನೈ ಯೋಜನೆಯು 26 ತಿಂಗಳೊಳಗೆ ಪೂರ್ಣಗೊಳ್ಳಲಿದೆ.
ಮತ್ತಷ್ಟು
ಎಸ್‌ಬಿಐ-ಎಸ್‌ಬಿಎಸ್ ವಿಲೀನಕ್ಕೆ ಅನುಮೋದನೆ
ಕರ್ನಾಟಕದ ಎಚ್ಐವಿ ಪೀಡಿತರಿಗೆ ವಿಮಾ ಪಾಲಿಸಿ
ಸಾಲಮನ್ನಾ: ಸೆಪ್ಟೆಂಬರ್ ಅಂತ್ಯದೊಳಗೆ 25,000 ಕೋ.ರೂ.
ಬಡ್ಡಿದರಗಳು ಗರಿಷ್ಠ ಮಟ್ಟದಲ್ಲಿವೆ: ಎಸ್‌ಬಿಐ
ರಖಂ ತೈಲ ಬೆಲೆಯಲ್ಲಿ ಇಳಿಕೆ ಇಲ್ಲ: ದೇವೊರಾ
ಜಿಡಿಪಿ ಅಂದಾಜು ಅಭಿವೃದ್ಧಿ ದರ ಶೇ.7.7ಕ್ಕೆ ಇಳಿಕೆ