ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರದಿಂದ 37 ಲಕ್ಷ ಉದ್ಯೋಗ ಸೃಷ್ಟಿ
ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಧಾನಮಂತ್ರಿಯವರ ರೋಜ್ಗಾರ್ ಯೋಜನೆ(ಪಿಎಂಆರ್‌ವೈ) ಮತ್ತು ಗ್ರಾಮೀಣ ಉದ್ಯೋಗ ನಿರ್ಮಾಣ ಕಾರ್ಯಕ್ರಮ(ಆರ್‌ಇಜಿಪಿ) ವಿಲೀನದೊಂದಿಗೆ, ದೇಶದಲ್ಲಿ ಸುಮಾರು 37 ಲಕ್ಷ ಉದ್ಯೋಗ ನಿರ್ಮಿಸಲು ನೂತನ ಉದ್ಯೋಗ ನಿರ್ಮಾಣ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಪ್ರಧಾನಮಂತ್ರಿಯವರ ಉದ್ಯೋಗ ನಿರ್ಮಾಣ ಕಾರ್ಯಕ್ರಮ(ಪಿಎಂಇಜಿಪಿ) ಎಂಬ ಈ ನೂತನ ಯೋಜನೆಯು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಸತ್ ಸಮಿತಿಯಲ್ಲಿ ಅಮುಮೋದನೆ ಪಡೆದುಕೊಂಡಿದೆ.

ಈ ನೂತನ ಯೋಜನೆಯಡಿ ಸುಮಾರು 37,37,500 ಉದ್ಯೋಗ ನಿರ್ಮಿಸುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಣ್ಣ, ಕಿರು ಮತ್ತು ಮಧ್ಯಮ ಸಂಸ್ಥೆಗಳ ಸಚಿವಾಲಯದ ಮೂಲಕ ಕಾರ್ಯಗತಗೊಳ್ಳಲಿರುವ ಪಿಎಂಇಜಿಪಿ ಯೋಜನೆಯಡಿಯಲ್ಲಿ, 25 ಲಕ್ಷ ರೂಪಾಯಿಯನ್ನು ಉತ್ಪಾದಕ ಕ್ಷೇತ್ರಕ್ಕೆ ಅಂಗೀಕರಿಸಲಾಗಿದೆ. ಸೇವಾ ಕ್ಷೇತ್ರಕ್ಕೆ ಹತ್ತು ಲಕ್ಷ ನಿಗದಿಪಡಿಸಲಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

ಸಾಮಾನ್ಯ ವಿಭಾಗದಲ್ಲಿ ನಗರ ಪ್ರದೇಶದಲ್ಲಿ ಯೋಜನೆಯ ಸಬ್ಸಿಡಿ ಮಟ್ಟವು ಶೇ.15ರಷ್ಟಿದ್ದು, ವಿಶೇಷ ವಿಭಾಗದಲ್ಲಿ ಶೇ.25ರಷ್ಟಾಗಿದೆ. ಇದು ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರನ್ನು ಒಳಗೊಂಡಿದೆ.

ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ವಿಭಾಗಕ್ಕೆ ಸಬ್ಸಿಡಿ ಮಟ್ಟವು ಶೇ.25 ಮತ್ತು ವಿಶೇಷ ವಿಭಾಗಕ್ಕೆ ಸಬ್ಸಿಡಿ ಮಟ್ಟವು ಶೇ.35ರಷ್ಟಾಗಿದೆ.
ಮತ್ತಷ್ಟು
ಚೆನ್ನೈ,ಕೋಲ್ಕತ್ತಾ ವಿ.ನಿಲ್ದಾಣ ಮೇಲ್ದರ್ಜೆಗೆ ಅನುಮೋದನೆ
ಎಸ್‌ಬಿಐ-ಎಸ್‌ಬಿಎಸ್ ವಿಲೀನಕ್ಕೆ ಅನುಮೋದನೆ
ಕರ್ನಾಟಕದ ಎಚ್ಐವಿ ಪೀಡಿತರಿಗೆ ವಿಮಾ ಪಾಲಿಸಿ
ಸಾಲಮನ್ನಾ: ಸೆಪ್ಟೆಂಬರ್ ಅಂತ್ಯದೊಳಗೆ 25,000 ಕೋ.ರೂ.
ಬಡ್ಡಿದರಗಳು ಗರಿಷ್ಠ ಮಟ್ಟದಲ್ಲಿವೆ: ಎಸ್‌ಬಿಐ
ರಖಂ ತೈಲ ಬೆಲೆಯಲ್ಲಿ ಇಳಿಕೆ ಇಲ್ಲ: ದೇವೊರಾ