ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಸಿಐಎಲ್‌ನಿಂದ ಪ್ರವಾಸೋದ್ಯಮದಲ್ಲಿ 250 ಕೋ ಹೂಡಿಕೆ
ಕಂಟ್ರಿ ಕ್ಲಬ್ ಆಫ್ ಇಂಡಿಯಾ(ಸಿಸಿಐಎಲ್) ಪ್ರವಾಸೋದ್ಯಮದಲ್ಲಿ 250 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಂಪೆನಿಯು ಇತ್ತೀಚೆಗಷ್ಟೆ ಪ್ರವಾಸೋದ್ಯಮಕ್ಕೆ ಇಳಿದಿದ್ದು, ಕೇರಳದ ಕೋವಲಮ್ ನಲ್ಲಿ ದೇಶೀಯ ಜಲಊಟೆಯೊಂದನ್ನು ಆರಂಭಿಸಿದೆ.

ಮುಂದಿನ ಎರಡು ವರ್ಷಗಳೊಳಗಾಗಿ ತಮ್ಮ ಆದಾಯದ 250 ಕೋಟಿ ರೂಪಾಯಿಯನ್ನು ಪ್ರವಾಸೋದ್ಯಮ ವ್ಯವಹಾರದಲ್ಲಿ ತೊಡಗಿಸುವುದಾಗಿ ಸಿಸಿಐಎಲ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ವೈ.ರಾಜೀವ್ ರೆಡ್ಡಿ ಹೇಳಿದ್ದಾರೆ. ಇಂತಹ ಇನ್ನೂ 9 ಊಟೆಗಳನ್ನು ಸ್ಥಾಪಿಸುವುದು ತಮ್ಮ ಉದ್ದೇಶವಾಗಿದೆ ಎಂದೂ ಅವರು ತಿಳಿಸಿದರು.

ಬೆಂಗಳೂರು, ಅಹಮದಾಬಾದ್, ಸೂರತ್, ಕೋಲ್ಕತಾ, ಚೆನ್ನೈ, ದೆಹಲಿ ಮತ್ತು ಮುಂಬೈ ಹಾಗೂ ದುಬೈಯಲ್ಲಿಯೂ ಈ ಯೋಜನೆಯನ್ನು ಹಮ್ಮಿಕೊಳ್ಳಲು ಸಂಸ್ಥೆ ನಿರ್ಧರಿಸಿರುವುದಾಗಿ ರೆಡ್ಡಿ ನುಡಿದರು.
ಮತ್ತಷ್ಟು
ಹಣದುಬ್ಬರ ಶೇ 12.44ಕ್ಕೇ ಏರಿಕೆ
ಸರಕಾರದಿಂದ 37 ಲಕ್ಷ ಉದ್ಯೋಗ ಸೃಷ್ಟಿ
ಚೆನ್ನೈ,ಕೋಲ್ಕತ್ತಾ ವಿ.ನಿಲ್ದಾಣ ಮೇಲ್ದರ್ಜೆಗೆ ಅನುಮೋದನೆ
ಎಸ್‌ಬಿಐ-ಎಸ್‌ಬಿಎಸ್ ವಿಲೀನಕ್ಕೆ ಅನುಮೋದನೆ
ಕರ್ನಾಟಕದ ಎಚ್ಐವಿ ಪೀಡಿತರಿಗೆ ವಿಮಾ ಪಾಲಿಸಿ
ಸಾಲಮನ್ನಾ: ಸೆಪ್ಟೆಂಬರ್ ಅಂತ್ಯದೊಳಗೆ 25,000 ಕೋ.ರೂ.