ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರು ಮತ್ತೆ 'ಹಸಿರಾಗು'ತ್ತಿದ್ದಾರೆ: ಪ್ರಧಾನಿ ಸಿಂಗ್
ನವದೆಹಲಿ: ಸುಮಾರು ದಶಕಗಳ ಕಾಲದ ಸ್ಥಗಿತತೆಯ ಬಳಿಕ ಕೃಷಿವಲಯವು ಮತ್ತೆ ಹಸಿರಾಗಿ ನಳನಳಿಸುತ್ತಿದೆ ಮತ್ತು ರೈತರು ಹೊರೆ ಮುಕ್ತರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಸ್ವಾತಂತ್ರ್ಯೋತ್ಸವ ವೇಳೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಹೆಚ್ಚೂಕಮ್ಮಿ ಒಂದು ದಶಕ ಅಂದರೆ, 1998-2004ರ ಸ್ಥಗಿತತೆಯ ಬಳಿಕ, ಇದೀಗ ಕೃಷಿವಲಯದಲ್ಲಿ ಹೂಡಿಕೆ ಹೆಚ್ಚುತ್ತಿದೆ ಮತ್ತು ಈ ವ್ಯಾಪ್ತಿಯ ಪುನಶ್ಚೇತನವಾಗುತ್ತಿದೆ ಎಂದು ನುಡಿದರು.

"ನಮ್ಮ ರೈತರು ಮತ್ತೆ ಹಸಿರಾಗುತ್ತಿದ್ದಾರೆ. ನಮ್ಮ ಗೋಡಾನ್‌ಗಳು ಮತ್ತೆ ತುಂಬುತ್ತಿವೆ. ನಮ್ಮ ರೈತರು ತಮ್ಮ ಭವಿಷ್ಯ ಮತ್ತು ಕಲ್ಯಾಣದ ಬಗ್ಗೆ ಮತ್ತೊಮ್ಮೆ ಆಶಾವಾದ ಹೊಂದಿದ್ದಾರೆ" ಎಂದು ಅವರು ನುಡಿದರು.

2007-08ರ ವೇಳೆಗೆ ಆಹಾರ ಧಾನ್ಯ, ಹತ್ತಿ ಮತ್ತು ಕಬ್ಬು ಬೆಳೆಯಲ್ಲಿ ದಾಖಲೆಯ ಉತ್ಪಾದನೆ ಪಡೆದಿದ್ದೇವೆ ಎಂದು ಅವರು ಹೇಳಿದ್ದಾರೆ.

ಸರಕಾರವು ಸುಮಾರು 71 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದೆ ಎಂದು ಪ್ರಧಾನಿ ಅವರು ಈ ಸಂದರ್ಭದಲ್ಲಿ ನುಡಿದರು. ಅಲ್ಲದೆ ರಾಷ್ಟ್ರೀಯ ಕಿಸಾನ್ ವಿಕಾಸ್ ಯೋಜನೆಯಲ್ಲಿ ಕೃಷಿವಲಯದಲ್ಲಿ 25 ಸಾವಿರಕೋಟಿ ರೂಪಾಯಿ ಹೂಡಿಕೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ಸಿಸಿಐಎಲ್‌ನಿಂದ ಪ್ರವಾಸೋದ್ಯಮದಲ್ಲಿ 250 ಕೋ ಹೂಡಿಕೆ
ಹಣದುಬ್ಬರ ಶೇ 12.44ಕ್ಕೇ ಏರಿಕೆ
ಸರಕಾರದಿಂದ 37 ಲಕ್ಷ ಉದ್ಯೋಗ ಸೃಷ್ಟಿ
ಚೆನ್ನೈ,ಕೋಲ್ಕತ್ತಾ ವಿ.ನಿಲ್ದಾಣ ಮೇಲ್ದರ್ಜೆಗೆ ಅನುಮೋದನೆ
ಎಸ್‌ಬಿಐ-ಎಸ್‌ಬಿಎಸ್ ವಿಲೀನಕ್ಕೆ ಅನುಮೋದನೆ
ಕರ್ನಾಟಕದ ಎಚ್ಐವಿ ಪೀಡಿತರಿಗೆ ವಿಮಾ ಪಾಲಿಸಿ