ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸನ್ ಡೈರೆಕ್ಟ್‌ನಿಂದ ಡಿಟಿಎಚ್ ಸೇವೆ ವೃದ್ಧಿ
ದಕ್ಷಿಣ ಭಾರತದ ಪ್ರಮುಖ ಡಿಟಿಎಚ್ ಸೇವಾ ಒದಗಕರಾಗಿರುವ ಸನ್ ಡೈರೆಕ್ಟ್ ಟಿವಿ ಪ್ರೈವೇಟ್ ಲಿ., ತನ್ನ ಯಶಸ್ಸನ್ನು ದೇಶದ ಇತರ ಭಾಗಗಳಿಗೂ ಕೊಂಡೊಯ್ಯಲು ಸಿದ್ಧವಾಗಿದೆ.

ಮುಂದಿನ 45 ದಿನಗಳಲ್ಲಿ ಕಂಪನಿಯು ತನ್ನ ಸೇವೆಯನ್ನು ಅಸ್ಸಾಂ, ಒರಿಸ್ಸಾ ಮತ್ತು ಪಶ್ಚಿಮಬಂಗಾಲದಲ್ಲಿ ಪ್ರಾರಂಭಿಸಲಿದೆ. ಇದಾದ ನಂತರ, ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸನ್ ಡೈರೆಕ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟೋನಿ ಡಿಸಿಲ್ವಾ ತಿಳಿಸಿದ್ದಾರೆ.

ಡಿಟಿಎಚ್ ಸೇವೆಯ ಬೆಲೆಗಳು ಅಧಿಕವಾಗಿದ್ದ ಸಮಯದಲ್ಲಿ, ಕಲಾನಿಧಿ ಮಾರನ್ ಕುಟುಂಬ ಮತ್ತು ಆಸ್ಟ್ರೋ ಗ್ರೂಪ್ ಆಫ್ ಮಲೇಶಿಯಾ ಜಂಟಿಯಾಗಿ ದಕ್ಷಿಣ ಭಾರತದಲ್ಲಿ ಈ ಸೇವೆಯನ್ನು ಪ್ರಾರಂಭಿಸಿದ್ದವು.

ಮುಂದಿನ 200 ದಿನಗಳಲ್ಲಿ ಸನ್ ಡೈರೆಕ್ಟ್ ಒಂದು ದಶಲಕ್ಷ ಗ್ರಾಹಕರನ್ನು ಹೊಂದಲಿದೆ. ರೂ.1999ರ ಡಿಟಿಎಚ್ ಸಂಪರ್ಕದೊಂದಿಗೆ, ಸೆಟಪ್ ಬಾಕ್ಸ್, ಡಿಶ್ ಆಂಟೆನಾಗಳನ್ನು ಒಳಗೊಂಡಿದ್ದು, ಜೊತೆಯಲ್ಲಿ ಗ್ರಾಹಕರಿಗೆ ಕೆಲವು ಉಚಿತ ಸರಕುಗಳನ್ನೂ ನೀಡುತ್ತದೆ.

ಪ್ರತಿ ತಿಂಗಳು 200,000 ಗ್ರಾಹಕರು ಸೇರ್ಪಡೆಗೊಳ್ಳುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆ, ಮೂರು ದಶಲಕ್ಷ ಗ್ರಾಹಕರನ್ನು ಹೊಂದುವ ಗುರಿ ಇದೆ. ಇತರ ಡಿಟಿಎಚ್ ಸೇವೆಗಳಾದ ಟಾಟಾ ಸ್ಕೈ ಮತ್ತು ಡಿಶ್ ಟಿವಿಯ ಗ್ರಾಹಕರಿಗಿಂತ ಸನ್ ಡೈರೆಕ್ಟ್‌ನ ಗ್ರಾಹಕರ ಪ್ರಮಾಣವು ಹೆಚ್ಚಾಗಿದೆ ಎಂದು ಡಿಸಿಲ್ವಾ ಹೇಳಿದ್ದಾರೆ,.
ಮತ್ತಷ್ಟು
ಖೋಟಾನೋಟು ನಿಗ್ರಹಕ್ಕೆ ಸರಕಾರದಿಂದ ಕಾರ್ಯತಂತ್ರ
ಪಾಕಿಸ್ತಾನಕ್ಕೆ ಡೀಸೆಲ್ ರಫ್ತು ಮಾಡಲು ರಿಲಯನ್ಸ್ ಚಿಂತನೆ
ಬಿಎಸ್ಎನ್ಎಲ್ ರಾಯಭಾರಿಯಾಗಿ ದೀಪಿಕಾ
ರೈತರು ಮತ್ತೆ 'ಹಸಿರಾಗು'ತ್ತಿದ್ದಾರೆ: ಪ್ರಧಾನಿ ಸಿಂಗ್
ಸಿಸಿಐಎಲ್‌ನಿಂದ ಪ್ರವಾಸೋದ್ಯಮದಲ್ಲಿ 250 ಕೋ ಹೂಡಿಕೆ
ಹಣದುಬ್ಬರ ಶೇ 12.44ಕ್ಕೇ ಏರಿಕೆ