ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇ ಎಸಿ ಬುಕ್ಕಿಂಗ್ ಪ್ರಮಾಣದಲ್ಲಿ ಶೇ.50 ಹೆಚ್ಚಳ
ವಿಮಾನಯಾನ ದರದಲ್ಲಿ ಹೆಚ್ಚಳ ಉಂಟಾಗಿರುವ ಹಿನ್ನೆಲೆಯಲ್ಲಿ ರೈಲ್ವೇ ಎಸಿ ಕೋಚ್‌ನ ಬೇಡಿಕೆ ಹೆಚ್ಚಾಗಿದ್ದು, ಇದರಿಂದಾಗಿ ರೈಲ್ವೇಯ ಹವಾನಿಯಂತ್ರಿತ ಕೋಚ್ ಬುಕ್ಕಿಂಗ್‌ನಲ್ಲಿ ಶೇ.50ರಷ್ಟು ಹೆಚ್ಚಳ ಉಂಟಾಗಿದೆ.

ಪ್ರಸಕ್ತ ವರ್ಷದ ಜುಲೈ ತಿಂಗಳಲ್ಲಿ ರೈಲ್ವೇಯ ತನ್ನ ಹವಾನಿಯಂತ್ರಿತ ಕೋಚ್‌ನಲ್ಲಿ ಸುಮಾರು 5.97 ದಶಲಕ್ಷ ಮಂದಿ ಪ್ರಯಾಣಿಸಿದ್ದು, ಜುಲೈ 2007ರಲ್ಲಿ ಇದರ ಪ್ರಮಾಣವು ನಾಲ್ಕು ದಶಲಕ್ಷದಷ್ಟಿತ್ತು. ಈ ಮೂಲಕ ಎಸಿ ಕೋಚ್ ಬುಕ್ಕಿಂಗ್‌ನಲ್ಲಿ ಶೇ.50ರಷ್ಟು ಹೆಚ್ಚಳ ಉಂಟಾಗಿದೆ.

ರಾಜಧಾನಿ ಮತ್ತು ಶತಾಬ್ದಿ ರೈಲುಗಳಲ್ಲಿ ಜುಲೈ ತಿಂಗಳ ಎಸಿ ಬುಕ್ಕಿಂಗ್‌ನಲ್ಲಿ ಶೇ.52ರಷ್ಟು ಏರಿಕೆಗೊಂಡಿದೆ.

ಕಡಿಮೆ ದರದ ವಿಮಾನದರದಿಂದಾಗಿ ಅನೇಕ ಪ್ರಯಾಣಿಕರನ್ನು ಕಳೆದುಕೊಂಡಿದ್ದ ಪಶ್ಚಿಮ ವಲಯದಲ್ಲಿ, ಈಗ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗುತ್ತಿದೆ.

ಕಡಿಮೆ ದರದ ವಿಮಾನಸೇವೆಯನ್ನು ಪ್ರಾರಂಭಿಸಿದ್ದಾಗ, ಎಸಿ|| ಮತ್ತು ಎಸಿ||| ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ವಿಮಾನ ಪ್ರಯಾಣವನ್ನು ಆರಿಸಿಕೊಂಡಿದ್ದರು. ಈಗ ವಿಮಾನ ದರಗಳು ಹೆಚ್ಚುಗೊಂಡಿದ್ದರಿಂದ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಸನ್ ಡೈರೆಕ್ಟ್‌ನಿಂದ ಡಿಟಿಎಚ್ ಸೇವೆ ವೃದ್ಧಿ
ಖೋಟಾನೋಟು ನಿಗ್ರಹಕ್ಕೆ ಸರಕಾರದಿಂದ ಕಾರ್ಯತಂತ್ರ
ಪಾಕಿಸ್ತಾನಕ್ಕೆ ಡೀಸೆಲ್ ರಫ್ತು ಮಾಡಲು ರಿಲಯನ್ಸ್ ಚಿಂತನೆ
ಬಿಎಸ್ಎನ್ಎಲ್ ರಾಯಭಾರಿಯಾಗಿ ದೀಪಿಕಾ
ರೈತರು ಮತ್ತೆ 'ಹಸಿರಾಗು'ತ್ತಿದ್ದಾರೆ: ಪ್ರಧಾನಿ ಸಿಂಗ್
ಸಿಸಿಐಎಲ್‌ನಿಂದ ಪ್ರವಾಸೋದ್ಯಮದಲ್ಲಿ 250 ಕೋ ಹೂಡಿಕೆ