ಜಾಗತಿಕ ಮಾರುಕಟ್ಟೆಯಲ್ಲಿನ ಮಂದ ಬೆಲೆಯಿಂದಾಗಿ, ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆಯು ಹತ್ತು ಗ್ರಾಂಗೆ 11,000 ರೂಪಾಯಿಗಿಂತ ಕೆಳಮಟ್ಟಕ್ಕೆ ಇಳಿಕೆಗೊಳ್ಳುವ ಸಾಧ್ಯತೆ ಇದೆ ಎಂದು ಹಿರಿಯ ಉದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಇಳಿಕೆಯಿಂದಾಗಿ ಈಗಾಗಲೇ ಚಿನ್ನದ ಬೆಲೆಯಲ್ಲಿ ಇಳಿಕೆ ಉಂಟಾಗಿದ್ದು, ಇದು ಹತ್ತು ಗ್ರಾಂಗಳಿಗೆ 10,400-10,600ಕ್ಕೆ ತಲುಪಲಿದೆ ಎಂದು ಮುಂಬಯಿ ಬುಲಿಯನ್ ಎಸೋಸಿಯೇಶನ್(ಬಿಬಿಎ) ಅಧ್ಯಕ್ಷ ಸುರೇಶ್ ಹುಂಡಿಯಾ ಹೇಳಿದ್ದಾರೆ.
ಜುಲೈ ತಿಂಗಳಲ್ಲಿ ದೇಶೀಯ ಚಿನ್ನದ ಬೆಲೆಯು ಹತ್ತು ಗ್ರಾಂಗಳಿಗೆ 12,900 ರೂ.ಗಳಿಗೆ ಏರಿಕೆ ಕಂಡಿತ್ತು. ಆದರೆ, ತಿಂಗಳಾಂತ್ಯದಲ್ಲಿ ಅದು 13,567 ರೂಪಾಯಿಗಳಿಗೆ ಇಳಿದಿತ್ತು.
|