ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದು ಎಸ್‌ಬಿಐ ನೌಕರರಿಂದ ಮುಷ್ಕರ
ಸ್ಟೇಟ್ ಬ್ಯಾಂಕ್ ಸೌರಾಷ್ಟ್ರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸುವ ನಿರ್ಧಾರವನ್ನು ವಿರೋಧಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಗಳು ಆಗಸ್ಟ್ 18 ಮತ್ತು 20ರಂದು ಮುಷ್ಕರ ನಡೆಸಲಿದ್ದು, ಇದು ಸಾರ್ವಜನಿಕ ಕ್ಷೇತ್ರದಲ್ಲಿನ ನಿಯಮಿತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಉಂಟಾಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಮತ್ತು ಅದರ ಏಳು ಎಸೋಸಿಯೇಟ್ಸ್ ಬ್ಯಾಂಕುಗಳು ಸೋಮವಾರ ಮುಷ್ಕರ ನಡೆಸಲಿದ್ದು, ಇತರ ಪಿಎಸ್‍‌ಯು ಬ್ಯಾಂಕುಗಳ ನೌಕರರು ಬುಧವಾರ ಮುಷ್ಕರ ನಡೆಸಲಿವೆ.

ಎಸ್‌ಬಿಎಸ್‌ಅನ್ನು ಎಸ್‌ಬಿಐನೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿ 15,000 ಶಾಖೆಗಳಲ್ಲಿ ಸುಮಾರು 80,000 ಎಸ್‌ಬಿಐ ಅಧಿಕಾರಿಗಳು ಹಾಗೂ ಇದರ ಏಳು ಸಹವರ್ತಿ ಬ್ಯಾಂಕುಗಳ ನೌಕರರು ಸೋಮವಾರ ಕಾರ್ಯಸ್ಥಗಿತಗೊಳಿಸಲಿದ್ದಾರೆ ಎಂದು ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಅಧಿಕಾರಿಗಳು ಒಕ್ಕೂಟದ ಅಧ್ಯಕ್ಷ ಟಿ.ಎನ್.ಗೋಲ್ ಹೇಳಿದ್ದಾರೆ.

ಇತ್ತೀಚೆಗೆ, ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕೇಂದ್ರ ಸಂಸತ್ತು ಅನುಮೋದನೆ ನೀಡಿತ್ತು.
ಮತ್ತಷ್ಟು
ಸೆಪ್ಟೆಂಬರ್‌ನಲ್ಲಿ ಚಿನ್ನದ ಬೆಲೆ ಇಳಿಕೆ
ಕಿಂಗ್‌ಫಿಶರ್‌ನಿಂದ ಮೊದಲ ವಿದೇಶಿ ಸೇವೆ ಪ್ರಾರಂಭ
ರೈಲ್ವೇ ಎಸಿ ಬುಕ್ಕಿಂಗ್ ಪ್ರಮಾಣದಲ್ಲಿ ಶೇ.50 ಹೆಚ್ಚಳ
ಸನ್ ಡೈರೆಕ್ಟ್‌ನಿಂದ ಡಿಟಿಎಚ್ ಸೇವೆ ವೃದ್ಧಿ
ಖೋಟಾನೋಟು ನಿಗ್ರಹಕ್ಕೆ ಸರಕಾರದಿಂದ ಕಾರ್ಯತಂತ್ರ
ಪಾಕಿಸ್ತಾನಕ್ಕೆ ಡೀಸೆಲ್ ರಫ್ತು ಮಾಡಲು ರಿಲಯನ್ಸ್ ಚಿಂತನೆ