ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಟೆಲ್: 75ಮಿಲಿಯ ದಾಟಿದ ಗ್ರಾಹಕರ ಸಂಖ್ಯೆ
ಭಾರತದ ಅತಿ ದೊಡ್ಡ ಖಾಸಗಿ ಟೆಲಿಕಾಂ ಕಂಪನಿ ಬಾರ್ತಿ ಏರ್‌ಟೆಲ್‌ನ ಗ್ರಾಹಕರ ಸಂಖ್ಯೆಯು 75 ದಶಲಕ್ಷ ಗಡಿಯನ್ನು ದಾಟಿದ್ದು, ವಿಶ್ವದ ನಾಲ್ಕನೇ ಅತಿ ದೊಡ್ಡ ಮೊಬೈಲ್ ನಿರ್ವಾಹಕ ಕಂಪನಿಯಾಗಿ ಹೊರಹೊಮ್ಮುತ್ತಿದೆ.

ಗ್ರಾಹಕರ ಆಧಾರದಲ್ಲಿ ಚೀನಾ ಮೊಬೈಲ್, ಚೀನಾ ಯುನಿಕಾಂ, ಮತ್ತು ಅಮೆರಿಕನ್ ಎಟಿ&ಟಿ ನಂತರದ ಸ್ಥಾನವನ್ನು ಭಾರ್ತಿ ಏರ್‌ಟೆಲ್ ಪಡೆದುಕೊಂಡಿದೆ.

ಗ್ರಾಹಕರ ಅಂಕಿಅಂಶವು, ಕಂಪನಿ ಮೊಬೈಲ್ ಸೇವೆ, ಟೆಲಿಮೀಡಿಯಾ ಸೇವೆ ಮುಂತಾದ ಎಲ್ಲಾ ವ್ಯವಹಾರ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿಕೆಗಳು ತಿಳಿಸಿವೆ.

ದೇಶದಲ್ಲಿ ಅತಿ ದೊಡ್ಡ ಟೆಲಿಕಾಂ ಉದ್ಯಮ ಎಂಬ ಖ್ಯಾತಿಪಡೆದಿರುವ ಬಗ್ಗೆ ಕಂಪನಿಗೆ ಹೆಮ್ಮೆ ಇದೆ ಎಂದು ಭಾರ್ತಿ ಏರ್‌ಟೆಲ್ ಸಿಇಒ ಮತ್ತು ಜಂಟಿ ನಿರ್ವಾಹಕ ನಿರ್ದೇಶಕ ಮನೋಜ್ ಕೋಹ್ಲಿ ತಿಳಿಸಿದ್ದಾರೆ.

ಕಂಪನಿಯು ಫೆಬ್ರವರಿ 2008ರಲ್ಲಿ 60 ದಶಲಕ್ಷ ಗ್ರಾಹಕರನ್ನು ಪಡೆದುಕೊಂಡಿದ್ದು, ಅಕ್ಟೋಬರ್ 2007ರಲ್ಲಿ ಇದು 50 ದಶಲಕ್ಷದಷ್ಟಿತ್ತು. ಈ ಮೂಲಕ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಿಕೆಗಳು ತಿಳಿಸಿವೆ.
ಮತ್ತಷ್ಟು
ಇಂದು ಎಸ್‌ಬಿಐ ನೌಕರರಿಂದ ಮುಷ್ಕರ
ಸೆಪ್ಟೆಂಬರ್‌ನಲ್ಲಿ ಚಿನ್ನದ ಬೆಲೆ ಇಳಿಕೆ
ಕಿಂಗ್‌ಫಿಶರ್‌ನಿಂದ ಮೊದಲ ವಿದೇಶಿ ಸೇವೆ ಪ್ರಾರಂಭ
ರೈಲ್ವೇ ಎಸಿ ಬುಕ್ಕಿಂಗ್ ಪ್ರಮಾಣದಲ್ಲಿ ಶೇ.50 ಹೆಚ್ಚಳ
ಸನ್ ಡೈರೆಕ್ಟ್‌ನಿಂದ ಡಿಟಿಎಚ್ ಸೇವೆ ವೃದ್ಧಿ
ಖೋಟಾನೋಟು ನಿಗ್ರಹಕ್ಕೆ ಸರಕಾರದಿಂದ ಕಾರ್ಯತಂತ್ರ