ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯಲ್ಲಿನ ಇಳಿಕೆಯು ಇಂಧನ ಕಂಪೆನಿಗಳ ನಷ್ಟದಲ್ಲಿನ ಪ್ರಮಾಣವನ್ನು ನಾಲ್ಕನೇ ಒಂದರಷ್ಟು ಕಡಿಮೆಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ಸೀಮೆಎಣ್ಣೆ ಮಾರಾಟದಲ್ಲಿ ಪ್ರತಿ ದಿನಕ್ಕೆ 600 ಕೋಟಿ ರೂಪಾಯಿ ನಷ್ಟವನ್ನು ಹೊಂದುತ್ತಿದ್ದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂನ ಪ್ರತಿದಿನದ ನಷ್ಟದ ಪ್ರಮಾಣವು 450 ಕೋಟಿ ರೂಪಾಯಿಗಳಿಗೆ ಇಳಿದಿದೆ.
ಅಂತಾರಾಷ್ಟ್ರೀಯ ಇಂಧನ ಬೆಲೆಯಲ್ಲಿನ ಇಳಿಕೆಯು ಸಮಾಧಾನಕರವಾಗಿದ್ದರೂ, ತೈಲ ಕಂಪನಿಗಳು ನಷ್ಟವನ್ನು ಇನ್ನೂ ಹೊಂದುತ್ತಿವೆ. ಆದ್ದರಿಂದ ಸದ್ಯಕ್ಕೆ ರಖಂ ಬೆಲೆಯಲ್ಲಿ ಕಡಿತ ಇಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
|