ಖಾಸಗಿ ಮೊಬೈಲ್ ನಿರ್ವಾಹಕರಿಂದ ಮುನ್ನಡೆ ಸಾಧಿಸುವ ಪ್ರಯತ್ನದೊಂದಿಗೆ, ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್, ಡಿಸೆಂಬರ್ ತಿಂಗಳಲ್ಲಿ 3ಜಿ ಮೊಬೈಲ್ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಉತ್ತರ, ಪೂರ್ವ ಮತ್ತು ಪಶ್ಚಿಮ ವಲಯಗಳಿಗೆ ಖರೀದಿ ಆದೇಶವನ್ನೂ ನೀಡಿದೆ.
ಎಲ್ಲಾ ಜಿಲ್ಲಾ ಟೆಲಿಕಾಂ ವಲಯಗಳಿಗೆ ಈ ಕುರಿತಾಗಿ ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸಲು ಕರೆ ನೀಡಿದ್ದು, ಈ ಮೂಲಕ ಡಿಸೆಂಬರ್ ತಿಂಗಳಲ್ಲಿ 3ಜಿ ಸೇವೆಯನ್ನು ಪ್ರಾರಂಭಿಸಲು ಸಾಧ್ಯವಾಗಲಿದೆ.
ಎಲ್ಲಾ ಸಂಸ್ಥೆಗಳು ಸಮಾನ ಬೆಲೆಯಲ್ಲಿ ಸೇವೆ ನೀಡಬೇಕು ಎಂಬ ಷರತ್ತಿನೊಂದಿಗೆ, 3ಜಿ ಸ್ಪೆಕ್ಟ್ರಂ ನೀಡಲು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್‌ಗೆ 3ಜಿ ನೀತಿ ಘೋಷಣೆಯ ವೇಳೆ ಐಟಿ ಮತ್ತು ಸಂಪರ್ಕ ಸಚಿವ ಟಿ.ರಾಜ ಅನುಮತಿ ನೀಡಿದ್ದರು.
ಉತ್ತರ ಮತ್ತು ಪೂರ್ವ ವಲಯಗಳಿಗೆ ಈಗಾಗಲೇ 3ಜಿ ಖರೀದಿ ಆದೇಶವನ್ನು ನೀಡಿದ್ದರೂ, 2ಜಿ ಸ್ಪೆಕ್ಟ್ರಂ ಅಲಭ್ಯತೆಯ ಕಾರಣ ಇದು ತಡೆಯಲ್ಲಿತ್ತು. ಈಗ ಬಿಎಸ್ಎನ್ಎಲ್‌ಗೆ 3ಜಿ ಸ್ಪೆಕ್ಟ್ರಂ ದೊರೆತ ಹಿನ್ನೆಲೆಯಲ್ಲಿ, 3ಜಿ ಖರೀದಿ ಆದೇಶವು ಆಗಸ್ಟ್ 11, 2008ರಿಂದ ಅನ್ವಯವಾಗುತ್ತದೆ ಎಂದು ಬಿಎಸ್ಎನ್ಎಲ್ ಹೇಳಿದೆ.
|