ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಟಿಡಿ ಕರೆ ದರ ಇನ್ನಷ್ಟು ಇಳಿಕೆ ಸಾಧ್ಯತೆ
ಇಂಟರ್ನೆಟ್ ಸೇವಾ ಸರಬರಾಜುದಾರರಿಗೆ(ಐಪಿಎಸ್) ನಿರ್ಬಂಧಿತ ಇಂಟರ್ನೆಟ್ ಟೆಲಿಫೋನಿ ಸೇವೆಯನ್ನು ನೀಡಲು ಟೆಲಿಕಾಂ ನಿಯಂತ್ರಕ ಟ್ರಾಯ್ ಸೋಮವಾರ ಅನುಮತಿ ನೀಡಿದೆ. ಈ ಬೆಳವಣಿಗೆಯು, ದೇಶೀಯ ದೂರ ಅಂತರ ವಲಯಗಳಲ್ಲಿ ಮತ್ತು ಕಡಿಮೆ ಎಸ್‌ಟಿಡಿ ಟಾರಿಫ್‌ಗಳಲ್ಲಿ ಸ್ಪರ್ಧೆಯನ್ನು ಮೂಡಿಸಲಿದೆ.

ವೆಚ್ಚ ಮತ್ತು ಇಂಟರ್ನೆಟ್ ಟೆಲಿಫೋನಿ ಸೇವೆಯಿಂದಾಗಿ ಟ್ರಾಯ್ ನಿರ್ಧಾರವು ಗ್ರಾಹಕರಿಗೆ ಪ್ರಯೋಜನ ನೀಡಲಿದೆ. ಈ ಶಿಫಾರಸ್ಸು, ಭಾರತೀಯ ಟೆಲಿಕಾಂ ಕ್ಷೇತ್ರವನ್ನು ಜಾಗತಿಕ ಟ್ರೆಂಡ್ ಜೊತೆ ಸೇರಿಸುತ್ತದೆ ಎಂದು ಟ್ರಾಯ್ ಹೇಳಿಕೆಗಳು ತಿಳಿಸಿವೆ.

ಟ್ರಾಯ್ ಶಿಫಾರಸ್ಸಿನ ಪ್ರಕಾರ, ಎಸ್‌ಟಿಡಿ ಸೇವಾ ಸರಬರಾಜುದಾರರು ಪಬ್ಲಿಕ್ ಇಂಟರ್ನೆಟ್ ಮೂಲಕ ಐಎಸ್‌ಪಿಗೆ ಸಂಪರ್ಕ ಹೊಂದಲಿದ್ದು, ಇದೇ ಸಮಯದಲ್ಲಿ ಎರಡೂ ಸೇವಾ ನೀಡುಗರು ಪರಸ್ಪರ ಒಡಂಬಡಿಕೆ ಮಾಡಿಕೊಂಡಿರುತ್ತಾರೆ.

ಈ ಬೆಳವಣಿಗೆಯಿಂದ ಪರ್ಸನಲ್ ಕಂಪ್ಯೂಟರ್‌ನಿಂದ ಸ್ಥಿರ ದೂರವಾಣಿಗಳಿಗೆ ಮತ್ತು ಮೊಬೈಲ್ ಫೋನ್‌ಗಳಿಗೆ ಕರೆ ಮಾಡಲು ಸಾಧ್ಯವಾಗಲಿದೆ. ಪ್ರಸಕ್ತ, ಧ್ವನಿ ಕರೆಯು ಎರಡು ಕಂಪ್ಯೂಟರ್‌ಗಳ ನಡುವೆ ಮಾತ್ರವೇ ಲಭ್ಯವಿದೆ. ಸ್ಥಿರ ದೂರವಾಣಿ ಅಥವಾ ಮೊಬೈಲ್‌ಗಳಿಗೆ ಲಭ್ಯವಿಲ್ಲ.
ಮತ್ತಷ್ಟು
ಡಿಸೆಂಬರ್ ಅಂತ್ಯದೊಳಗೆ ಬಿಎಸ್ಎನ್ಎಲ್‌ನಿಂದ 3ಜಿ ಸೇವೆ
ತೈಲ ಕಂಪನಿಗಳ ನಷ್ಟದ ಪ್ರಮಾಣದಲ್ಲಿ ಇಳಿಕೆ
ಏರ್‌ಟೆಲ್: 75ಮಿಲಿಯ ದಾಟಿದ ಗ್ರಾಹಕರ ಸಂಖ್ಯೆ
ಇಂದು ಎಸ್‌ಬಿಐ ನೌಕರರಿಂದ ಮುಷ್ಕರ
ಸೆಪ್ಟೆಂಬರ್‌ನಲ್ಲಿ ಚಿನ್ನದ ಬೆಲೆ ಇಳಿಕೆ
ಕಿಂಗ್‌ಫಿಶರ್‌ನಿಂದ ಮೊದಲ ವಿದೇಶಿ ಸೇವೆ ಪ್ರಾರಂಭ