ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದು ತೈಲ ಸಚಿವರಿಂದ ಪಿಎಸ್‌ಯು ಕಾರ್ಯಾವಲೋಕನ
ತೈಲ ಸಾರ್ವಜನಿಕ ಕ್ಷೇತ್ರ ನಿರ್ವಹಣೆ(ಪಿಎಸ್‌ಯು)ಯ ಕಾರ್ಯಾವಲೋಕನ ನಡೆಸಲು ಮತ್ತು ಪಿಎಸ್‌ಯುಗಳು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಬಗ್ಗೆ ಮಾತುಕತೆ ನಡೆಸಲು, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಮುರಲಿ ದೇವೊರಾ, ಸಾರ್ವಜನಿಕ ತೈಲ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ.

ರಾಜ್ಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ದಿನ್ಶಾ ಪಟೇಲ್ ಮತ್ತು ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ ಅವರೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ವಿತರಿಸುವ ವಿಚಾರಕ್ಕೆ ಈ ಸಭೆಯಲ್ಲಿ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ.

ಮುಂಬರುವ ಹಬ್ಬದಿನಗಳ ಪೂರ್ವಾಭಾವಿಯಾಗಿ, ತೈಲ ಕಂಪನಿಗಳಲ್ಲಿರುವ ಇಂಧನ ಸಂಗ್ರಹ ಲಭ್ಯತೆಯ ಬಗ್ಗೆ ಸಚಿವರು ವಿಮರ್ಷೆ ನಡೆಸಲಿದ್ದು, ಇದರೊಂದಿಗೆ ಕೊರತೆಯನ್ನು ಕಡಿಮೆಗೊಳಿಸಲು ತೈಲ ಕಂಪನಿಗಳ ಸಿದ್ಧತೆಯ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ.

ಸೂಕ್ಷ್ಣ್ಮ ಇಂಧನಗಳಾದ ಪೆಟ್ರೋಲ್, ಡೀಸೆಲ್,ದೇಶೀಯ ಎಲ್‌ಪಿಜಿ ಮತ್ತು ಪಿಡಿಎಸ್ ಸೀಮೆಎಣ್ಣೆ ಕೊರತೆಯ ಕಾರಣದಿಂದಾಗಿ, ತೈಲ ಮಾರುಕಟ್ಟೆ ಕಂಪನಿಗಳ(ಒಎಂಸಿ) ಹಣಕಾಸು ಪರಿಸ್ಥಿತಿಯ ಅವಲೋಕನವು ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ.

ಅಲ್ಲದೆ, ಉನ್ನತ ಅಧಿಕಾರದ ಬಿ.ಕೆ.ಚತುರ್ವೇದಿ ಸಮಿತಿಯ ಶಿಫಾರಸ್ಸಿನ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಮತ್ತಷ್ಟು
ಎಸ್‌ಟಿಡಿ ಕರೆ ದರ ಇನ್ನಷ್ಟು ಇಳಿಕೆ ಸಾಧ್ಯತೆ
ಡಿಸೆಂಬರ್ ಅಂತ್ಯದೊಳಗೆ ಬಿಎಸ್ಎನ್ಎಲ್‌ನಿಂದ 3ಜಿ ಸೇವೆ
ತೈಲ ಕಂಪನಿಗಳ ನಷ್ಟದ ಪ್ರಮಾಣದಲ್ಲಿ ಇಳಿಕೆ
ಏರ್‌ಟೆಲ್: 75ಮಿಲಿಯ ದಾಟಿದ ಗ್ರಾಹಕರ ಸಂಖ್ಯೆ
ಇಂದು ಎಸ್‌ಬಿಐ ನೌಕರರಿಂದ ಮುಷ್ಕರ
ಸೆಪ್ಟೆಂಬರ್‌ನಲ್ಲಿ ಚಿನ್ನದ ಬೆಲೆ ಇಳಿಕೆ