ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೋಹಾ ಸಮಸ್ಯೆ ಪರಿಹರಿಸಲು ಅಮೆರಿಕ, ಭಾರತಕ್ಕೆ ಕರೆ
ದೋಹಾ ಸುತ್ತಿನ ವಿಶ್ವ ವ್ಯಾಪಾರ ಮಾತುಕತೆಯ ಕುರಿತಾಗಿ ಪರಸ್ಪರ ಸಂಧಾನ ಮಾಡಿಕೊಳ್ಳುವ ನಿಟ್ಟಿನಲ್ಲಿ, ಅಮೆರಿಕ, ಭಾರತ ಮತ್ತು ಚೀನಾವು ಡಬ್ಲ್ಯೂಟಿಒ ಪ್ರಧಾನ ನಿರ್ದೇಶಕ ಪಾಸ್ಕಲ್ ಲ್ಯಾಮಿ ಅವರೊಂದಿಗೆ ಒಮ್ಮತದಿಂದ ಕಾರ್ಯನಿರ್ವಹಿಸಬೇಕು ಎಂದು ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ರೋಬರ್ಟ್ ಬಿ. ಜೋಲಿಕ್ ಮನವಿ ಮಾಡಿದ್ದಾರೆ.

ಅತಿ ಹೆಚ್ಚು ಕೃಷಿಉತ್ಪನ್ನ ರಫ್ತು ಮಾಡುವ ಮತ್ತು ಹೆಚ್ಚಿನ ಕೃಷಿಕರನ್ನು ಹೊಂದಿರುವ ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಬ್ರೆಜಿಲ್, ಸಹಾಯ ಮಾಡಬಹುದು ಎಂದು ಅವರು ಹೇಳಿದ್ದು, ಇದರೊಂದಿಗೆ, ಆಸ್ಟ್ರೇಲಿಯಾ ಮತ್ತು ಇಂಡೋನೇಶಿಯಾವು ಸಹ ಪರಿಹಾರ ನೀಡಬಹುದು ಎಂದು ಹೇಳಿದ್ದಾರೆ.

ಕೃಷಿಗೆ ವಿಶೇಷ ಸುರಕ್ಷತೆಯನ್ನು ನೀಡುವ ಬಗೆಗಿನ ಭಿನ್ನಾಭಿಪ್ರಾಯದಿಂದಾಗಿ ವಿಫಲಗೊಂಡ ಡಬ್ಲ್ಯೂಟಿಒ ಮಾತುಕತೆಯನ್ನು ಕಡೆಗಣಿಸಬೇಡಿ ಎಂಬ ಬ್ರೆಜಿಲ್ ಅಧ್ಯಕ್ಷ ಲೂಲಾ ಡ ಸಿಲ್ನಾ ಅವರ ಕರೆಯು ಸಮರ್ಥವಾಗಿದೆ ಎಂದು ಅವರು ಹೇಳಿದ್ದಾರೆ.

ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರ ಉತ್ಪನ್ನಗಳನ್ನು ನೀಡಲು ಮತ್ತು ಇತರ ಕೆಲವು ಕೃಷಿ ಸಂಬಂಧಿ ಸಮಸ್ಯೆಗಳನ್ನು ಬಗೆಹರಿಸಲು ದೋಹಾ ಮಾತುಕತೆಯನ್ನು ಕಡೆಗಣಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ, ಅಮೆರಿಕ, ಭಾರತ, ಮತ್ತು ಚೀನಾವು ಲ್ಯಾಮಿ ಅವರೊಂದಿಗೆ ಕಾರ್ಯನಿರ್ವಹಿಸಲು ಒಟ್ಟಾಗಿ ಸಂಧಾನ ನಡೆಸಬೇಕು ಎಂದು ಜೋಲಿಕ್ ಒತ್ತಾಯಿಸಿದ್ದಾರೆ.
ಮತ್ತಷ್ಟು
ಇಂದು ತೈಲ ಸಚಿವರಿಂದ ಪಿಎಸ್‌ಯು ಕಾರ್ಯಾವಲೋಕನ
ಎಸ್‌ಟಿಡಿ ಕರೆ ದರ ಇನ್ನಷ್ಟು ಇಳಿಕೆ ಸಾಧ್ಯತೆ
ಡಿಸೆಂಬರ್ ಅಂತ್ಯದೊಳಗೆ ಬಿಎಸ್ಎನ್ಎಲ್‌ನಿಂದ 3ಜಿ ಸೇವೆ
ತೈಲ ಕಂಪನಿಗಳ ನಷ್ಟದ ಪ್ರಮಾಣದಲ್ಲಿ ಇಳಿಕೆ
ಏರ್‌ಟೆಲ್: 75ಮಿಲಿಯ ದಾಟಿದ ಗ್ರಾಹಕರ ಸಂಖ್ಯೆ
ಇಂದು ಎಸ್‌ಬಿಐ ನೌಕರರಿಂದ ಮುಷ್ಕರ