ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್ ಡಿಟಿಎಚ್ ಸೇವೆ ಪ್ರಾರಂಭ
ಅನಿಲ್ ಅಂಬಾನಿ ಸಮೂಹದ ಡಿಟಿಎಚ್ ಸಂಸ್ಥೆ ರಿಲಯನ್ಸ್ ಬಿಗ್ ಟಿವಿ, ತನ್ನ ಡಿಟಿಎಚ್ ಸೇವೆಯನ್ನು ಮಂಗಳವಾರ ಭಾರತದಾದ್ಯಂತ ಪ್ರಾರಂಭಿಸಿರುವುದಾಗಿ ಕಂಪನಿಯು ಘೋಷಿಸಿದೆ.

ರಿಲಾಯನ್ಸ್ ಕಮ್ಯುನಿಕೇಶನ್ಸ್‌ನ ಸಹ ಸಂಸ್ಥೆಯಾಗಿರುವ ರಿಲಯನ್ಸ್ ಬಿಗ್ ಟಿವಿ, ಪ್ರಾರಂಭಿಕ ಹಂತದಲ್ಲಿ ಗ್ರಾಹಕರಿಗೆ 200 ಚಾನೆಲ್‌ಗಳ ಲಭ್ಯತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೆಗಳು ತಿಳಿಸಿವೆ.

ದೇಶದ ಸುಮಾರು 6,500 ನಗರಗಳಲ್ಲಿ ಈ ಸೇವೆಯು ಲಭ್ಯವಿದೆ ಎಂದು ಕಂಪನಿ ಪ್ರಕಟಣೆಗಳು ಹೇಳಿವೆ.

ತನ್ನ ಡಿಟಿಎಚ್ ಸೇವೆಯ ಗುಣಮಟ್ಟ ವೃದ್ಧಿಗಾಗಿ ಕಂಪನಿಯು ಕರೆ ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರತಿದಿನ ಸುಮಾರು 50,000 ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಗ್ರಾಹಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕಂಪನಿ ಪ್ರಕಟಣೆಗಳು ತಿಳಿಸಿದೆ.
ಮತ್ತಷ್ಟು
ದೋಹಾ ಸಮಸ್ಯೆ ಪರಿಹರಿಸಲು ಅಮೆರಿಕ, ಭಾರತಕ್ಕೆ ಕರೆ
ಇಂದು ತೈಲ ಸಚಿವರಿಂದ ಪಿಎಸ್‌ಯು ಕಾರ್ಯಾವಲೋಕನ
ಎಸ್‌ಟಿಡಿ ಕರೆ ದರ ಇನ್ನಷ್ಟು ಇಳಿಕೆ ಸಾಧ್ಯತೆ
ಡಿಸೆಂಬರ್ ಅಂತ್ಯದೊಳಗೆ ಬಿಎಸ್ಎನ್ಎಲ್‌ನಿಂದ 3ಜಿ ಸೇವೆ
ತೈಲ ಕಂಪನಿಗಳ ನಷ್ಟದ ಪ್ರಮಾಣದಲ್ಲಿ ಇಳಿಕೆ
ಏರ್‌ಟೆಲ್: 75ಮಿಲಿಯ ದಾಟಿದ ಗ್ರಾಹಕರ ಸಂಖ್ಯೆ