ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಸೋದ್ಯಮ ರಾಯಭಾರಿಯಾಗಿ ಅಮೀರ್ ಖಾನ್
ತನ್ನ ಫನಾ ಚಿತ್ರದ ಬಳಿಕ ಬಾಲಿವುಡ್ ನಟ ಅಮೀರ್ ಖಾನ್, ಸ್ಕಾರ್ಫ್‌ ಧರಿಸುವ ಟ್ರೆಂಡನ್ನು ಟ್ಯಾಕ್ಸಿ ಡ್ರೈವರ್ ಮತ್ತು ಪ್ರವಾಸಿ ಗೈಡ್‌ಗಳಲ್ಲಿ ಮೂಡಿಸಿದ್ದರು.

ಆದರೆ, ಸ್ಪೋರ್ಟಿಂಗ್ ಸ್ಕಾರ್ಫ್ ಧರಿಸಿದ ಟ್ಯಾಕ್ಸಿ ಡ್ರೈವರ್‌ಗಳ ಈ ಟ್ರೆಂಡ್, ವಿದೇಶಿ ಪ್ರವಾಸಿಗರಲ್ಲಿ ಭೀತಿ ಉಂಟುಮಾಡುತ್ತದೆ ಎಂದು ಪ್ರವಾಸೋಧ್ಯಮ ಸಚಿವಾಲಯವು ಹೇಳಿತ್ತು.

ಈ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ, ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ವಿದೇಶಿಯರಿಗೆ ಪರಿಚಯಿಸಲು, ಪ್ರವಾಸೋದ್ಯಮ ಸಚಿವಾಲಯವು ತನ್ನ ಬ್ರಾಂಡ್ ಪ್ರಚಾರ ಅತಿಥಿ ದೇವೋ ಭವದ ರಾಯಭಾರಿಯಾಗಿ ಅಮೀರ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಪ್ರವಾಸೋದ್ಯಮ ಸಚಿವಾಲಯದ ಈ ಪ್ರಸ್ತಾಪವನ್ನು ಅಧಿಕೃತವಾಗಿ ಸ್ವೀಕರಿಸಲು ಅಮೀರ್ ಖಾನ್ ಶುಕ್ರವಾರ ಪ್ರವಾಸೋದ್ಯಮ ಸಚಿವ ಅಂಬಿಕಾ ಸೋನಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದರು. ಈ ಪ್ರಚಾರಾಂದೋಲನದಲ್ಲಿ ಭಾಗಿಯಾಗಲು ನನಗೆ ಸಂತೋಷವಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ವೈಯಕ್ತಿಕ ಸಿದ್ಧತೆ ಮತ್ತು ಪ್ರವಾಸಿಗರೊಂದಿಗಿನ ಸೂಕ್ತ ವರ್ತನೆಯು ಅಮೀರ್ ಖಾನ್ ಅವರ ಕಾರ್ಯಸೂಚಿಯಾಗಿದೆ. ಅಲ್ಲದೆ, ಟೂರಿಸ್ಟ್ ಗೈಡ್‌ಗಳಿಗೆ ಮತ್ತು ಟ್ಯಾಕ್ಸಿ ಡ್ರೈವರ್‌ಗಳಿಗೆ ಅಮೀರ್ ಖಾನ್ ತರಬೇತಿ ನೀಡಲಿದ್ದಾರೆ.

ಪ್ರವಾಸೋದ್ಯಮ ಸಚಿವಾಲಯದ ಆಮಂತ್ರಣವನ್ನು ನಾನು ಸ್ವೀಕರಿಸಿದ್ದೇನೆ. ಇದು ನನಗೆ ಅತ್ಯಂತ ಸಂತೋಷವನ್ನು ನೀಡಿದೆ ಎಂದು ಅಮೀರ್ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತಷ್ಟು
ರಿಲಯನ್ಸ್ ಡಿಟಿಎಚ್ ಸೇವೆ ಪ್ರಾರಂಭ
ದೋಹಾ ಸಮಸ್ಯೆ ಪರಿಹರಿಸಲು ಅಮೆರಿಕ, ಭಾರತಕ್ಕೆ ಕರೆ
ಇಂದು ತೈಲ ಸಚಿವರಿಂದ ಪಿಎಸ್‌ಯು ಕಾರ್ಯಾವಲೋಕನ
ಎಸ್‌ಟಿಡಿ ಕರೆ ದರ ಇನ್ನಷ್ಟು ಇಳಿಕೆ ಸಾಧ್ಯತೆ
ಡಿಸೆಂಬರ್ ಅಂತ್ಯದೊಳಗೆ ಬಿಎಸ್ಎನ್ಎಲ್‌ನಿಂದ 3ಜಿ ಸೇವೆ
ತೈಲ ಕಂಪನಿಗಳ ನಷ್ಟದ ಪ್ರಮಾಣದಲ್ಲಿ ಇಳಿಕೆ