ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಪಿಜಿ ಹೊಸ ಸಂಪರ್ಕ ನೀಡಲು ಆದೇಶ
ದೇಶದ ವಿವಿಧ ಭಾಗಗಳಲ್ಲಿನ ಇಂಧನ ಪೂರೈಕೆ ಕೊರತೆಯ ಬಗ್ಗೆ ಸರಕಾರವು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ನೂತನ ಸಂಪರ್ಕಕ್ಕಾಗಿ ಕಾದಿರುವ ಗ್ರಾಹಕರಿಗೆ 60 ದಿನಗಳೊಳಗೆ ಎಲ್‌ಪಿಜಿ ವಿತರಣೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.

ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಇಂದು ನಡೆದ ಸಭೆಯಲ್ಲಿ ದೇಶದಲ್ಲಿನ ಆವಶ್ಯಕ ಇಂಧನ ಪೂರೈಕೆ ಮತ್ತು ವಿತರಣೆಯ ಬಗ್ಗೆ ಪೆಟ್ರೋಲಿಯಂ ಸಚಿವ ಮುರಲಿ ದೇವೊರಾ ವಿಮರ್ಷೆ ನಡೆಸಿದ್ದು, ಮುಂದಿನ ಹಬ್ಬದ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ವಿತರಣೆಯಾಗುವಂತೆ ಸಲಹೆಗಳನ್ನು ನೀಡಿದರು.

ಬೇಡಿಕೆಗೆ ಅನುಗುಣವಾಗಿ ಎಲ್‌ಪಿಜಿ ಸಂಪರ್ಕವು ಲಭ್ಯವಿದೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ, ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ನೂತನ ಎಲ್‌ಪಿಜಿ ಸಂಪರ್ಕವನ್ನು ವಿತರಿಸಲು ನಿಧಾನ ಮಾಡುತ್ತಿರುವ ಮತ್ತು ಹೆಚ್ಚುತ್ತಿರುವ ನಷ್ಟದಿಂದಾಗಿ ಆಟೋ ಇಂಧನ ಪೂರೈಕೆಯನ್ನು ಕಡಿಮೆಗೊಳಿಸುತ್ತಿರುವ ಕುರಿತಾಗಿ ತೈಲ ಕಂಪನಿಗಳ ಸಿಇಒಗಳನ್ನು ಪಾಂಡೇ ತರಾಟೆಗೆ ತೆಗೆದುಕೊಂಡಿದ್ದು, ನೂತನ ಎಲ್‌ಪಿಜಿ ಸಂಪರ್ಕಕ್ಕಾಗಿ ಕಾದಿರುವ ಗ್ರಾಹಕರ ಪಟ್ಟಿಯನ್ನು ಪೂರ್ಣಗೊಳಿಸುವಂತೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂಗಳಿಗೆ ಕರೆ ನೀಡಿದೆ.
ಮತ್ತಷ್ಟು
ಪ್ರವಾಸೋದ್ಯಮ ರಾಯಭಾರಿಯಾಗಿ ಅಮೀರ್ ಖಾನ್
ರಿಲಯನ್ಸ್ ಡಿಟಿಎಚ್ ಸೇವೆ ಪ್ರಾರಂಭ
ದೋಹಾ ಸಮಸ್ಯೆ ಪರಿಹರಿಸಲು ಅಮೆರಿಕ, ಭಾರತಕ್ಕೆ ಕರೆ
ಇಂದು ತೈಲ ಸಚಿವರಿಂದ ಪಿಎಸ್‌ಯು ಕಾರ್ಯಾವಲೋಕನ
ಎಸ್‌ಟಿಡಿ ಕರೆ ದರ ಇನ್ನಷ್ಟು ಇಳಿಕೆ ಸಾಧ್ಯತೆ
ಡಿಸೆಂಬರ್ ಅಂತ್ಯದೊಳಗೆ ಬಿಎಸ್ಎನ್ಎಲ್‌ನಿಂದ 3ಜಿ ಸೇವೆ