ವಿವಿಧ ವ್ಯಾಪಾರ ಸಂಘಗಳಿಂದ ನೀಡಲ್ಪಟ್ಟಿರುವ ಅಖಿಲ ಭಾರತ ಬಂದ್ ಕರೆಯು ದೇಶದ ವಿಮಾನಯಾನ ಸೇವೆಯ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ದೆಹಲಿಯಿಂದ ಕೋಲ್ಕತ್ತಾಗೆ ಹೋಗುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ದೆಹಲಿಯಿಂದ ತಿರುವನಂತಪುರಂ ಮತ್ತು ಕೊಚ್ಚಿಗೆ ಹೋಗುವ ವಿಮಾನಗಳ ಮೇಲೂ ಈ ಬಂದ್ ಪರಿಣಾಮ ಬೀರಲಿದೆ.
ಇದರೊಂದಿಗೆ, ಬ್ಯಾಂಕಿಂಗ್ ಕ್ಷೇತ್ರದ ಮೇಲೂ ಭಾರತ್ ಬಂದ್ ಪರಿಣಾಮ ಬೀರುವ ಸಾಧ್ಯತೆ ಇದೆ.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮತ್ತು ಸೆಂಟ್ರಲ್ ಫಾರ್ ಇಂಡಸ್ಟ್ರಿಯಲ್ ಟ್ರೇಡ್ ಯೂನಿಯನ್ ಸೇರಿದಂತೆ ಎಲ್ಲಾ ಎಡ ವ್ಯಾಪಾರ ಸಂಘಗಳು ಹಣದುಬ್ಬರ ಏರಿಕೆ ಮತ್ತು ಇದನ್ನು ನಿಯಂತ್ರಿಸುವಲ್ಲಿ ಯುಪಿಎ ಸರಕಾರದ ವಿಫಲತೆಯ ವಿರುದ್ಧ ಭಾರತ್ ಬಂದ್‌ಗೆ ಕರೆ ನೀಡಿದೆ.
ಇಂದಿನ ಪ್ರತಿಭಟನೆಯಲ್ಲಿ ರಸ್ತೆ ಮತ್ತು ರೈಲು ಸಂಚಾರವನ್ನು ತಡೆಹಿಡಿಯಲು ಈ ಒಕ್ಕೂಟವು ನಿರ್ಧರಿಸಿದೆ.
ಎಡರಂಗ ಆಡಳಿತ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ ಮತ್ತು ತ್ರಿಪುರದಲ್ಲಿ ಇದು ತೀವ್ರ ರೀತಿಯ ಪರಿಣಾಮವನ್ನು ಬೀರಲಿದೆ.
ದೇಶದಾದ್ಯಂತ ಬ್ಯಾಂಕಿಂಗ್ ವಹಿವಾಟುಗಳ ಮೇಲೂ ಬಂದ್ ಪರಿಣಾಮ ಬೀರಲಿದ್ದು, ಸ್ಟೇಟ್ ಬ್ಯಾಂಕ್ ಹೊರತಾಗಿ, ಎಲ್ಲಾ ಸರಕಾರಿ ವಲಯದ ಬ್ಯಾಂಕ್‌ಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
|