ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇ-ನ್ಯಾನೋ ಪ್ರಾರಂಭಕ್ಕೆ ಟಾಟಾ ಚಿಂತನೆ
ವಿಶ್ವದಲ್ಲೇ ಅಗ್ಗವೆಂದು ಪರಿಗಣಿಸಲ್ಪಟ್ಟ ಒಂದು ಲಕ್ಷ ರೂಪಾಯಿ ಬೆಲೆಗೆ ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡಲು ಸಿದ್ಧತೆ ನಡೆಸುತ್ತಿರುವ ಟಾಟಾ ಮೋಟಾರ್ಸ್, ವಿದ್ಯುತ್ ಚಾಲಿತ ಕಾರು ನಿರ್ಮಿಸುವ ಯೋಜನೆಯನ್ನು ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಾರ್ವೇಯ ಎಲೆಕ್ಟ್ರಿಕ್ ಕಾರ್ ನಿರ್ಮಾಣ ಸಂಸ್ಥೆ ಮಿಲ್ಜೋಬಿಲ್ ಗ್ರೆನ್‌ಲ್ಯಾಂಡ್ ಸಹಕಾರದೊಂದಿಗೆ ಇ-ನ್ಯಾನೋ ನಿರ್ಮಾಣಗೊಳ್ಳಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿ ಹೊಂದುವ ವಿಶ್ವಾಸವಿರುವ ನ್ಯಾನೋ ಕಾರು ಈ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ. ಆದರೆ, ಹೆಚ್ಚುತ್ತಿರುವ ಕಚ್ಚಾವಸ್ತುಗಳ ಬೆಲೆಯಿಂದಾಗಿ, ಕಡಿಮೆ ಬೆಲೆಯಲ್ಲಿ ಟಾಟಾ ಮೋಟಾರ್ಸ್ ಕಾರು ಮಾರಾಟ ಮಾಡುವ ಬಗ್ಗೆ ಉದ್ಯಮ ವಿಶ್ಲೇಷಕರು ಶಂಕೆ ವ್ಯಕ್ತಪಡಿಸಿದ್ದಾರೆ.

ನ್ಯಾನೋ, 33 ಎಚ್‌ಪಿ 623 ಸಿಸಿ ಇಂಧನ ಹೊಂದಿರುವ ಸಾಮಾನ್ಯ ಕಾರಾಗಿದ್ದು, ಆಧುನಿಕ ಕಾರುಗಳು ಹೊಂದಿರುವ ಹವಾನಿಯಂತ್ರಣ, ಎಲೆಕ್ಟ್ರಿಕ್ ವಿಂಡೋ, ಪವರ್ ಸ್ಟೇರಿಂಗ್ ಮುಂತಾದವುಗಳನ್ನು ಇದು ಹೊಂದಿಲ್ಲ.
ಮತ್ತಷ್ಟು
ಎಸ್‌ಬಿಐನಿಂದ ಹೃದಯ ಸುರಕ್ಷಾ ಯೋಜನೆ
ಭಾರತ ಬಂದ್: ಅಗತ್ಯ ಸೇವೆಗಳ ಮೇಲೆ ಪರಿಣಾಮ
ಎಲ್‌ಪಿಜಿ ಹೊಸ ಸಂಪರ್ಕ ನೀಡಲು ಆದೇಶ
ಪ್ರವಾಸೋದ್ಯಮ ರಾಯಭಾರಿಯಾಗಿ ಅಮೀರ್ ಖಾನ್
ರಿಲಯನ್ಸ್ ಡಿಟಿಎಚ್ ಸೇವೆ ಪ್ರಾರಂಭ
ದೋಹಾ ಸಮಸ್ಯೆ ಪರಿಹರಿಸಲು ಅಮೆರಿಕ, ಭಾರತಕ್ಕೆ ಕರೆ