ಆದಿತ್ಯ ಬಿರ್ಲಾ ಗ್ರೂಪ್ ನಿಯಂತ್ರಣದ ಐಡಿಯ ಸೆಲ್ಯುಲರ್, ಮುಂಬಯಿನಲ್ಲಿ ಬುಧವಾರ ಮೊಬೈಲ್ ಸೇವೆಯನ್ನು ಪ್ರಾರಂಭಿಸಿದೆ.
ಮುಂಬಯಿ ಭಾರತದ ವಾಣಿಜ್ಯ ನಗರವಾಗಿದ್ದು, ಈ ನಗರದಲ್ಲಿ ಗುಣಮಟ್ಟದ ಮೊಬೈಲ್ ಟೆಲಿಫೋನ್ ಸೇವೆ ಪ್ರಾರಂಭಿಸಲಿದ್ದೇವೆ ಎಂದು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ, ಸೇವೆಯ ಅನಾವರಣದ ವೇಳೆ ತಿಳಿಸಿದ್ದಾರೆ.
ಇದು ಐಡಿಯಾಗೆ ಮೈಲಿಗಲ್ಲಿನ ದಿನವಾಗಿದ್ದು, ಮುಂಬಯಿನಲ್ಲಿನ ಐಡಿಯಾ ಸೇವೆ ಪ್ರಾರಂಭವು ದೇಶದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿನ ಮುಂಚೂಣಿಗೆ ಮುನ್ನಡೆಯಾಗಿದೆ ಎಂದು ಅವರು ಹೇಳಿದರು.
1,800 ಎಂಎಚ್ ಫ್ರೀಕ್ವೆನ್ಸಿಯಲ್ಲಿ ಐಡಿಯಾ ಮುಂಬೈ ನಿರ್ವಹಣೆಗೊಳ್ಳಲಿದ್ದು, ಪ್ರಾಥಮಿಕವಾಗಿ 1,000 ಸೆಲ್ ಸೈಟ್‌ಗಳನ್ನು ಹೊಂದುವ ಗುರಿಯನ್ನು ಹೊಂದಿದೆ. ಎಂದು ಬಿರ್ಲಾ ತಿಳಿಸಿದ್ದಾರೆ.
ಇದರೊಂದಿಗೆ, ಐಡಿಯಾ ಕರೆ ಕೇಂದ್ರಗಳನ್ನು ಪ್ರಾರಂಭಿಸಲಿದ್ದು, ಮುಂಬಯಿನಲ್ಲಿ ಪ್ರತ್ಯೇಕ 60 ಕರೆ ಕೇಂದ್ರಗಳನ್ನು ಹೊಂದಲಿದೆ.
ಅಲ್ಲದೆ, ಡಾಟಾ ಕಾರ್ಡ್ ಮತ್ತು ಸಾರ್ವಜನಿಕ ಕರೆ ಕೇಂದ್ರಗಳಂತಹ ಸ್ಥಳೀಯ ಫೋನ್ ಬೂತ್ ವಲಯಗಳಲ್ಲಿಯೂ ತನ್ನ ಸೇವೆಯನ್ನು ಪ್ರಾರಂಭಿಸಲಿದೆ.
|