ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭವಿಷ್ಯದ ಬಿಲಿಯಾಧಿಪತಿಗಳಲ್ಲಿ ಭಾರತದ ನಿಶಿತಾ ಶಾ
ಭಾರತೀಯ ಮೂಲದ 28 ವರ್ಷದ ನಿಶಿತಾ ಶಾ, ಗಾಲ್ಫ್ ಆಟಗಾರ ಡೈಗರ್ ವುಡ್, ಪೇ ಪಲ್ ಫಿಗರ್‌ನ ಎಲೊನ್ ಮುಸ್ಕ್ ಮುಂದಿನ ತಲೆಮಾರಿನ ಶತರಕೋಟಿ ವಹಿವಾಟಿನ ಉದ್ಯಮಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

ಹಾಲಿವುಡ್ ನಟ ಟೇಲರ್ ಪೆರ್ರಿ , ಜಪಾನ್‌ನ ಪ್ರಮುಖ ಪೋರ್ಟಲ್ ಮಿಕ್ಸಿ ಕೆಂಜಿ ಕಸಾಹರಾ ಸೋಶಿಯಲ್ ನೆಟ್‌ವರ್ಕ್ ವೆಬ್‌ಸೈಟ್ ಬೆಬೊದ ಮಿಖೈಲ್ ಮತ್ತು ಕ್ಸೊಚಿ ಬಿರ್ಚ್ ಅವರು ಮುಂದಿನ ಬಿಲಿಯಾಧಿಪತಿಗಳ ಸಾಲಿನಲ್ಲಿ ಸೇರಿದ್ದಾರೆ.

ಥಾಯ್ಲೆಂಡ್‌ನಲ್ಲಿ ಜಿಪಿ ಗ್ರುಪ್ ಆಫ್ ಕಂಪೆನಿ ಹೊಂದಿರುವ ನಿಶಿತಾ ಕುಟುಂಬದ ಆಸ್ತಿ 37.5 ಕೋಟಿ ಡಾಲರ್. ಅವರನ್ನು ಥಾಯ್ಲೆಂಡ್ ಶ್ರೀಮಂತ ಕುಟುಂಬಗಳಲ್ಲಿ ಒಬ್ಬರೆಂದು ಫೋರ್ಬ್ಸ್ ಗುರುತಿಸಿದೆ. ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನಿಶಿತಾ ಆಸ್ತಿ ಮುಂಬರುವ ದಿನಗಳಲ್ಲಿ 100 ಕೋಟಿ ದಾಟಲಿದೆ ಎಂದು ಫೋರ್ಬ್ಸ್ ಅಂದಾಜು ಮಾಡಿದೆ.

ಶಾ ಕುಟುಂಬಕ್ಕೆ ಹಡಗು ವಹಿವಾಟಿನಲ್ಲಿ 140 ವರ್ಷದ ವಹಿವಾಟಿನ ಅನುಭವವಿದೆ. ನಿತಿಶಾ ತಂದೆ ಕಿರಿಟ್ 1989ರಲ್ಲಿ ಹಡಗೋದ್ಯಮವನ್ನು ಸ್ಥಾಪಿಸಿ 1993ರಲ್ಲಿ ಸಾರ್ವಜನಿಕ ವಹಿವಾಟಿನಲ್ಲಿ ತೊಡಗಿಸಿದರು. 44 ಹಡುಗುಗಳ ಮಾಲೀಕತ್ವವನ್ನು ಹೊಂದಿದ್ದು ಶಾ ಥಾಯ್ಲೆಂಡ್‌ನಲ್ಲಿ ಅತಿ ದೊಡ್ಡ ವೈಯಕ್ತಿಕ ಶೇರುದಾರರಾಗಿದ್ದಾರೆ ಎಂದು ಫೋರ್ಬ್ಸ್ ಪ್ರಕಟಿಸಿದೆ.

ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ಮೂರು ಖಂಡಗಳಲ್ಲಿ ಫ್ಯಾಶನ್ ಉದ್ಯಮವನ್ನು ಆರಂಭಿಸಲು ನಿರ್ಧರಿಸಿದ್ದು ಜಗತ್ತಿನಾದ್ಯಂತ ಕೆಲ ಆಯ್ದ ಬ್ಯೂಟಿ ಪಾರ್ಲರ್‌ಗಳನ್ನು ಆರಂಭಿಸಲು 40 ಗ್ರುಪ್ ಕಂಪೆನಿಗಳ ನಿರ್ದೇಶಕಿಯಾದ ನಿತಿಶಾ ಶಾ ನಿರ್ಧರಿಸಲಿದ್ದಾರೆ. ತನ್ನದೇ ಹೆಸರಿನ ಫ್ಯಾಶನ್ ಲೇಬಲ್‌ನ್ನು ಮಾರುಕಟ್ಟೆಗೆ ಪರಿಚಯಿಸಲೂ ಅವರು ನಿರ್ಧರಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ
ಮತ್ತಷ್ಟು
ಮುಂಬಯಿನಲ್ಲಿ ಐಡಿಯಾದಿಂದ ಮೊಬೈಲ್ ಸೇವೆ ಪ್ರಾರಂಭ
31,000 ರೂ.ಗೆ ವಡಾಫೋನ್ ಐಫೋನ್ 3ಜಿ
ಇ-ನ್ಯಾನೋ ಪ್ರಾರಂಭಕ್ಕೆ ಟಾಟಾ ಚಿಂತನೆ
ಎಸ್‌ಬಿಐನಿಂದ ಹೃದಯ ಸುರಕ್ಷಾ ಯೋಜನೆ
ಭಾರತ ಬಂದ್: ಅಗತ್ಯ ಸೇವೆಗಳ ಮೇಲೆ ಪರಿಣಾಮ
ಎಲ್‌ಪಿಜಿ ಹೊಸ ಸಂಪರ್ಕ ನೀಡಲು ಆದೇಶ