ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೈದರಾಬಾದಿನಲ್ಲಿ ಮಲೇಷಿಯಾ ಏರ್‌ಲೈನ್ಸ್‌ ಕೇಂದ್ರ
ಕೌಲಾಲಂಪುರ : ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ವಹಣಾ ಕೇಂದ್ರವನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಮಲೇಷಿಯಾ ಏರ್‌ಲೈನ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಂಆರ್, ಹೈದರಾಬಾದ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನ್ಯೂ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಏರ್‌‍ಪೋರ್ಟ್‌‌ನಲ್ಲಿ ವಿಮಾನಗಳ ನಿರ್ವಹಣೆ, ದುರಸ್ಥಿ ಮತ್ತು ಬಿಡಿಭಾಗಗಳ ಜೋಡಣೆ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಎಂಆರ್ ಕಂಪೆನಿಯಂದಿಗೆ ಸೂಕ್ತ ಸಮಯದಲ್ಲಿ ಪಾಲುದಾರಿಕೆಯನ್ನು ಆರಂಭಿಸಲಾಗಿದ್ದು, ಭಾರತದ ವೈಮಾನಿಕ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಹೆಚ್ಚಿನ ವಿಮಾನಗಳ ಬೇಡಿಕೆ ದೊರೆಯುವ ನಿರೀಕ್ಷೆಯಿದೆ ಎಂದು ಮಲೇಷಿಯಾದ ಏರ್‌ಲೈನ್ಸ್ ಹಣಕಾಸು ವಿಭಾಗದ ಮುಖ್ಯಸ್ಥ ಅಝ್ಮಿಲ್ ಜಹೀರುದ್ದಿನ್ ಹೇಳಿದ್ದಾರೆ.

ಮಲೇಷಿಯಾ ಏರ್‌ಲೈನ್ಸ್ ಜಿಎಂಆರ್‌ನೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ತಾಂತ್ರಿಕ ಮತ್ತು ವ್ಯವಸ್ಥಾಪನೆ ತಜ್ಞರನ್ನು ಒದಗಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಭವಿಷ್ಯದ ಬಿಲಿಯಾಧಿಪತಿಗಳಲ್ಲಿ ಭಾರತದ ನಿಶಿತಾ ಶಾ
ಮುಂಬಯಿನಲ್ಲಿ ಐಡಿಯಾದಿಂದ ಮೊಬೈಲ್ ಸೇವೆ ಪ್ರಾರಂಭ
31,000 ರೂ.ಗೆ ವಡಾಫೋನ್ ಐಫೋನ್ 3ಜಿ
ಇ-ನ್ಯಾನೋ ಪ್ರಾರಂಭಕ್ಕೆ ಟಾಟಾ ಚಿಂತನೆ
ಎಸ್‌ಬಿಐನಿಂದ ಹೃದಯ ಸುರಕ್ಷಾ ಯೋಜನೆ
ಭಾರತ ಬಂದ್: ಅಗತ್ಯ ಸೇವೆಗಳ ಮೇಲೆ ಪರಿಣಾಮ