ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾರ್ಷಿಕ 2 ಲಕ್ಷ ಕಾರು ರಫ್ತಿಗೆ ಮಾರುತಿ ಯೋಜನೆ
ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರವಹಿಸಲು ಜಪಾನ್ ಮೂಲದ ಸುಝುಕಿ ಮೋಟಾರ್ಸ್ ಕಾರ್ಪೋರೇಶನ್‌ನ ಮಾರುತಿ ಸುಝುಕಿ ಇಂಡಿಯಾ, ಮುಂಬರುವ 2010-11ರ ವೇಳೆಗೆ ವಾರ್ಷಿಕವಾಗಿ 2 ಲಕ್ಷ ಕಾರುಗಳನ್ನು ರಫ್ತು ಮಾಡಲು ಉದ್ದೇಶಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದೇಶಿಯ ಮಾರುಕಟ್ಟೆಯಲ್ಲಿ 2010-11ರ ವೇಳೆಗೆ ಒಂದು ಮಿಲಿಯನ್ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಮುಂಬರುವ ಮೂರರಿಂದ ಐದು ವರ್ಷಗಳಲ್ಲಿ ಹೆಚ್ಚಿನ ಮೈಲೇಜ್ ಕೊಡುವ ಇಂಜಿನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ ಎಂದು ಕಂಪೆನಿ ತಿಳಿಸಿದೆ.

2007-08ರ ಸಾಲಿನಲ್ಲಿ 53 ಸಾವಿರ ಕಾರುಗಳನ್ನು ರಫ್ತು ಮಾಡಿ ಐತಿಹಾಸಿಕ ಸಾಧನೆಯನ್ನು ಮಾಡಿದ್ದು, ಮುಂಬರುವ 2010-11ರ ವೇಳೆಗೆ 2ಲಕ್ಷ ಕಾರುಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದು ಮಾರುತಿ ಸುಝುಕಿ ಇಂಡಿಯಾದ ವ್ಯವಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಶಿಂಝೋ ನಕಾನಿಶಿ ತಿಳಿಸಿದ್ದಾರೆ.

ಮಾರುತಿ ಸುಝುಕಿ ಉತ್ಪಾದನೆಯಾದ ಮಾಡೆಲ್-ಎ ಸ್ಟಾರ್ ಜಗತ್ತಿನ ಅತ್ಯುತ್ತಮ ಮಾಡೆಲ್‌ ಆಗಿದ್ದರಿಂದ ಮುಖ್ಯವಾಗಿ ಯುರೋಪ್ ಮತ್ತು ಇತರ ರಾಷ್ಟ್ರಗಳಿಗೆ ರಫ್ತು ಮಾಡಲಾಗುವುದು ಎಂದು ಹೇಳಿದ್ದಾರೆ.
ಮತ್ತಷ್ಟು
ಹೈದರಾಬಾದಿನಲ್ಲಿ ಮಲೇಷಿಯಾ ಏರ್‌ಲೈನ್ಸ್‌ ಕೇಂದ್ರ
ಭವಿಷ್ಯದ ಬಿಲಿಯಾಧಿಪತಿಗಳಲ್ಲಿ ಭಾರತದ ನಿಶಿತಾ ಶಾ
ಮುಂಬಯಿನಲ್ಲಿ ಐಡಿಯಾದಿಂದ ಮೊಬೈಲ್ ಸೇವೆ ಪ್ರಾರಂಭ
31,000 ರೂ.ಗೆ ವಡಾಫೋನ್ ಐಫೋನ್ 3ಜಿ
ಇ-ನ್ಯಾನೋ ಪ್ರಾರಂಭಕ್ಕೆ ಟಾಟಾ ಚಿಂತನೆ
ಎಸ್‌ಬಿಐನಿಂದ ಹೃದಯ ಸುರಕ್ಷಾ ಯೋಜನೆ