ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನುದಾನ: ಸರಕಾರಕ್ಕೆ ಏರ್‌ ಇಂಡಿಯಾ ಮನವಿ
ನವದೆಹಲಿ : ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾಗೆ ಸರಕಾರದಿಂದ ವಿಮಾನಗಳ ಖರೀದಿಗಾಗಿ 20 ಬಿಲಿಯನ್ ರೂ.ಗಳ ಸಹಾಯಧನ ನೀಡುವಂತೆ ಮನವಿ ಮಾಡಲಾಗುವುದು ಎಂದು ಏರ್‌ ಇಂಡಿಯಾದ ಅಧ್ಯಕ್ಷ ರಘು ಮೆನನ್ ತಿಳಿಸಿದ್ದಾರೆ.

ಇಂಧನ ದರಗಳಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ 2100 ಕೋಟಿ ರೂ.ಗಳ ಹಾನಿಯಾಗಿದ್ದು ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಮಂಡಳಿ, ಏರ್ ಇಂಡಿಯಾಗೆ ಆದೇಶಿಸಲಾಗಿದ್ದು, ನಿಯಮಾವಳಿಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ರಘು ಮೆನನ್ ತಿಳಿಸಿದ್ದಾರೆ.

ಏರ್‌ ಇಂಡಿಯಾದ ಹಣಕಾಸು ವಿಭಾಗ ವೆಚ್ಚಗಳ ಕಡಿತ ಕುರಿತಂತೆ ರೂಪಿಸಲಾದ ನಿಯಮಗಳನ್ನು ಕಳೆದ ಕೆಲ ತಿಂಗಳುಗಳ ಹಿಂದೆ ಮಂಡಳಿಗೆ ಸಲ್ಲಿಸಿದ್ದು ಶೀಘ್ರದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಮೆನನ್ ತಿಳಿಸಿದ್ದಾರೆ.

ಏರ್‌ ಇಂಡಿಯಾದ ಹಣಕಾಸು ವಿಭಾಗದ ಸುತ್ತೊಲೆ ಪ್ರಕಾರ ಏರ್‌ ಇಂಡಿಯಾದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ವಿದೇಶ ಪ್ರವಾಸವನ್ನು ಕಡಿತಗೊಳಿಸಲಾಗಿದ್ದು, ಸಾಗರೋತ್ತರ ಪ್ರಯಾಣ ಮಾಡುವ ಸಿಬ್ಬಂದಿಗೆ ಆದಷ್ಟು ಕಡಿಮೆ ವೆಚ್ಚದಲ್ಲಿ ಕೊಠಡಿಗಳು ಲಭ್ಯವಿರುವ ಕ್ರ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲು ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ವಾರ್ಷಿಕ 2 ಲಕ್ಷ ಕಾರು ರಫ್ತಿಗೆ ಮಾರುತಿ ಯೋಜನೆ
ಹೈದರಾಬಾದಿನಲ್ಲಿ ಮಲೇಷಿಯಾ ಏರ್‌ಲೈನ್ಸ್‌ ಕೇಂದ್ರ
ಭವಿಷ್ಯದ ಬಿಲಿಯಾಧಿಪತಿಗಳಲ್ಲಿ ಭಾರತದ ನಿಶಿತಾ ಶಾ
ಮುಂಬಯಿನಲ್ಲಿ ಐಡಿಯಾದಿಂದ ಮೊಬೈಲ್ ಸೇವೆ ಪ್ರಾರಂಭ
31,000 ರೂ.ಗೆ ವಡಾಫೋನ್ ಐಫೋನ್ 3ಜಿ
ಇ-ನ್ಯಾನೋ ಪ್ರಾರಂಭಕ್ಕೆ ಟಾಟಾ ಚಿಂತನೆ