ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮ್ಮನ ಮೊರೆ ಹೋಗಲು ಅಂಬಾನಿಗಳಿಗೆ ಕೋರ್ಟ್ ಸಲಹೆ
ಕೃಷ್ಣ ಗೋದಾವರಿ ಜಲಾನಯದಿಂದ ಅನಿಲ ಸರಬರಾಜು ಒಪ್ಪಂದ ಕುರಿತಂತೆ ಕಳೆದ 2005ರಿಂದ ಉಂಟಾದ ಬಿಕ್ಕಟ್ಟು ನಿವಾರಣೆಗೆ ತಾಯಿಯ ನೆರವು ಕೋರುವಂತೆ ಮುಂಬೈ ಹೈಕೋರ್ಟ್ ಅಂಬಾನಿ ಸಹೋದರರಿಗೆ ಸಲಹೆ ನೀಡಿದೆ.

ತನ್ನ ಕಕ್ಷಿದಾರ ಅನಿಲ್ ಇಂಬಾನಿ, ಮುಕೇಶ್ ಅಂಬಾನಿಯವರೊಂದಿಗೆ ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ಏಕಾಂಗಿಯಾಗಿ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂದು ವಕೀಲರಾದ ಮುಕುಲ್ ರೋಹತ್ಯಾಗಿ ಅವರ ಹೇಳಿಕೆಯ ನಂತರ ಮುಂಬೈ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎನ್ ಪಟೇಲ್ ನೇತೃತ್ವದ ನ್ಯಾಯಪೀಠ, ಅಂಬಾನಿ ಸಹೋದರರಿಗೆ ತಾಯಿಯ ಮಧ್ಯಸ್ಥಿಕೆ ಕೋರುವಂತೆ ಸಲಹೆ ನೀಡಿತು.

ಹಿರಿಯ ವಕೀಲರಾದ ರಾಮ್‌ ಜೇಠ್ಮಲಾನಿ ಅವರು ಮಾತನಾಡಿ ಅಂಬಾನಿ ಸಹೋದರರು ಪರಸ್ಪರ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಥವಾ ಬಿಕ್ಕಟ್ಟು ಇತ್ಯರ್ಥಕ್ಕೆ ತಾಯಿಯ ಸಲಹೆ ಪಡೆಯಲಿ ಎಂದಿದ್ದಾರೆ. ರಾಮ್ ಜೇಠ್ಮಲಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಮಿಲಿಂದ್ ಸಾಠೆ, ತಾನು ರಿಲಯನ್ಸ್ ಮತ್ತು ಮುಕೇಶ್ ಅಂಬಾನಿಯವರ ಪರವಾಗಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲು ಬರಲಿಲ್ಲ. ಆದರೆ ನ್ಯಾಯಾಲಯದಿಂದ ಸೂಚನೆಗಳನ್ನು ಪಡೆಯಲು ಬಂದಿದ್ದೇನೆ ಎಂದು ಹೇಳಿದರು.

ಹಿರಿಯ ವಕೀಲರ ವಾದವನ್ನು ಗಮನಿಸಿದ ನ್ಯಾಯಮೂರ್ತಿ ಜೆ.ಎನ್.ಪಟೇಲ್, ಅಂಬಾನಿ ಸಹೋದರರು ತಾಯಿಯ ಸಲಹೆ ಪಡೆದು ಬಿಕ್ಕಟ್ಟನ್ನು ಇತ್ಯರ್ಥಗೊಳಿಸಲಿ. ಇದು ಕೇವಲ ಕುಟುಂಬದ ವಾಜ್ಯವಲ್ಲ. ನೈಸರ್ಗಿಕ ಅನಿಲ ರಾಷ್ಟ್ರದ ಸ್ವತ್ತಾಗಿದ್ದರಿಂದ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದಾಗಿದೆ. ಸಾರ್ವಜನಿಕರ ಪರವಾಗಿ ಪರಿಹಾರ ಬಿಕ್ಕಟ್ಟು ಇತ್ಯರ್ಥಗೊಳ್ಳಬೇಕು ಎಂದು ಸಲಹೆ ನೀಡಿದರು

ಮುಕೇಶ್ ಅಂಬಾನಿ ಮಾಲೀಕತ್ವದ ರಿಲ್‌ನಿಂದ ಅನಿಲ್ ಅಂಬಾನಿಯವರ ರಿಲಯನ್ಸ್ ನ್ಯಾಚುರಲ್ ರಿಸೊರ್ಸ್ ಲಿಮಿಟೆಡ್ ಪವರ್ ಪ್ಲ್ಯಾಂಟ್‌ಗೆ ನೈಸರ್ಗಿಕ ಅನಿಲ ಸರಬರಾಜು ಒಪ್ಪಂದ ಕುರಿತಂತೆ ಅಂಬಾನಿ ಸಹೋದರರಲ್ಲಿ ಬಿಕ್ಕಟ್ಟು ಎದುರಾಗಿದೆ.
ಮತ್ತಷ್ಟು
ಹಣದುಬ್ಬರ ಶೇ.12.63 ಏರಿಕೆ
ಅನುದಾನ: ಸರಕಾರಕ್ಕೆ ಏರ್‌ ಇಂಡಿಯಾ ಮನವಿ
ವಾರ್ಷಿಕ 2 ಲಕ್ಷ ಕಾರು ರಫ್ತಿಗೆ ಮಾರುತಿ ಯೋಜನೆ
ಹೈದರಾಬಾದಿನಲ್ಲಿ ಮಲೇಷಿಯಾ ಏರ್‌ಲೈನ್ಸ್‌ ಕೇಂದ್ರ
ಭವಿಷ್ಯದ ಬಿಲಿಯಾಧಿಪತಿಗಳಲ್ಲಿ ಭಾರತದ ನಿಶಿತಾ ಶಾ
ಮುಂಬಯಿನಲ್ಲಿ ಐಡಿಯಾದಿಂದ ಮೊಬೈಲ್ ಸೇವೆ ಪ್ರಾರಂಭ