ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಇಳಿಕೆಗೆ ಹಣಕಾಸು ಸಚಿವಾಲಯ ಪ್ರಯತ್ನ
ನಿರಂತರ ಏರಿಕೆಯತ್ತ ಸಾಗುತ್ತಿರುವ ಹಣದುಬ್ಬರ ಶೇ.13ರ ಗಡಿಯನ್ನು ದಾಟದಂತೆ ತಡೆಯಲು ಹಣಕಾಸು ಸಚಿವಾಲಯ ಪ್ರಯತ್ನಿಸುತ್ತಿದ್ದು, ದೇಶದಲ್ಲಿ ಗೋಧಿ ಮತ್ತು ಭತ್ತದ ಸಂಗ್ರಹ ಉತ್ತಮವಾಗಿದ್ದು ಇನ್ನುಳಿದ ಕೆಲ ಅಹಾರ ಧಾನ್ಯಗಳ ದರಗಳು ಇಳಿಕೆಯಾಗುವ ಸಾಧ್ಯತೆಗಳಿವೆ ಎಂಬ ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಹಣದುಬ್ಬರ ಶೇ. 13ರ ಗಡಿಯನ್ನು ದಾಟುವುದಿಲ್ಲವೆಂಬ ವಿಶ್ವಾಸವಿದೆ ಎಂದಿರುವ ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಜಿ.ಕೆ ಪಿಳ್ಳೈ , ಹಣದುಬ್ಬರ ಇಳಿಕೆಯಾಗುವತ್ತ ಸಾಗಿದೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ಕೆಲ ಅಹಾರ ಧಾನ್ಯಗಳ ದರಗಳಲ್ಲಿ ಇಳಿಕೆಯಾಗಿದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳದ ದರದಲ್ಲಿ ಇಳಿಕೆಯಾಗಿದೆ ಎಂದು ಪಿಳ್ಳೈ ತಿಳಿಸಿದ್ದಾರೆ.

ಅಮದು ವಹಿವಾಟಿನಲ್ಲಿ ದರ ನಿಯಂತ್ರಣದಲ್ಲಿದ್ದು ಖಾದ್ಯ ತೈಲವನ್ನು ಅನುದಾನಿತ ದರಗಳಲ್ಲಿ ಒದಗಿಸಲು ಸರಕಾರ ಯೋಜನೆಗಳನ್ನು ಹಮ್ಮಿಕೊಂಡಿದೆ. ಬಡತನದ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪ್ರತಿ ಕೆಜಿ. ಗೆ 10 ರೂ.ಯಂತೆ ಅನುದಾನ ನೀಡಲು ಉದ್ದೇಶಿಸಿದೆ ಎಂದು ಪಿಳ್ಳೈ ಹೇಳಿದ್ದಾರೆ.

ದರಗಳ ಏರಿಕೆ ಕುರಿತಂತೆ ಸಂಪುಟ ಸಭೆ ನಿನ್ನೆ ಸಭೆ ಸೇರಿ ಚರ್ಚಿಸಿದ್ದು ಮುಂದಿನ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಲು ನಿರ್ಧರಿಸಿದೆ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಜಿ.ಕೆ ಪಿಳ್ಳೈ ತಿಳಿಸಿದ್ದಾರೆ.
ಮತ್ತಷ್ಟು
ಅಮ್ಮನ ಮೊರೆ ಹೋಗಲು ಅಂಬಾನಿಗಳಿಗೆ ಕೋರ್ಟ್ ಸಲಹೆ
ಹಣದುಬ್ಬರ ಶೇ.12.63 ಏರಿಕೆ
ಅನುದಾನ: ಸರಕಾರಕ್ಕೆ ಏರ್‌ ಇಂಡಿಯಾ ಮನವಿ
ವಾರ್ಷಿಕ 2 ಲಕ್ಷ ಕಾರು ರಫ್ತಿಗೆ ಮಾರುತಿ ಯೋಜನೆ
ಹೈದರಾಬಾದಿನಲ್ಲಿ ಮಲೇಷಿಯಾ ಏರ್‌ಲೈನ್ಸ್‌ ಕೇಂದ್ರ
ಭವಿಷ್ಯದ ಬಿಲಿಯಾಧಿಪತಿಗಳಲ್ಲಿ ಭಾರತದ ನಿಶಿತಾ ಶಾ