ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ಗೋಧಿ ಮುಕ್ತ ಮಾರುಕಟ್ಟೆಗೆ -ಪವಾರ್
ಮುಂಬರುವ ವಾರದಲ್ಲಿ ಮುಕ್ತ ಮಾರುಕಟ್ಟೆ ಹಾಗೂ ಬಡತನದ ರೇಖೆಗಿಂತ ಮೇಲಿರುವ ಗ್ರಾಹಕರಿಗೆ ಪಡಿತರ ವಿತರಣೆ ಅಂಗಡಿಗಳ ಮೂಲಕ 5-6 ಮಿಲಿಯನ್ ಟನ್ ಗೋಧಿಯನ್ನು ಮಾರಾಟ ಮಾಡಲು ನಿರ್ಧರಿಸುವುದಾಗಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.

ಮುಕ್ತ ಮಾರುಕಟ್ಟೆಯಲ್ಲಿ ಗೋಧಿಯನ್ನು ಮಾರಾಟ ಮಾಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮತಿ ನೀಡಿದ್ದು, ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಭತ್ತದ ದರಗಳನ್ನು ನಿಯಂತ್ರಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶದ ಎಲ್ಲ ರಾಜ್ಯಗಳಲ್ಲಿ ಗೋಧಿ ಹಾಗೂ ಭತ್ತದ ದರಗಳನ್ನು ಪರಿಶೀಲಿಸಿದ್ದು, ವಿಶೇಷವಾಗಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಗೋಧಿ ಹಾಗೂ ಭತ್ತದ ದರಗಳಲ್ಲಿ ಏರಿಕೆ ಕಂಡುಬಂದಿದೆ. ಕಾರ್ಯದರ್ಶಿಗಳ ಸಮಿತಿ ಪ್ರತಿವಾರ ದರಗಳ ಸ್ಥಿತಿಗತಿಯನ್ನು ಪರಿಶೀಲಿಸುತ್ತಿದ್ದು ಗೋಧಿ ಹಾಗೂ ಭತ್ತದ ಸಂಗ್ರಹವನ್ನು ಮಾರಾಟ ಮಾಡುವ ಸ್ಥಳವನ್ನು ನಿರ್ಧರಿಸುತ್ತದೆ ಎಂದು ಸಚಿವ ಪವಾರ್ ತಿಳಿಸಿದ್ದಾರೆ.

ಪಡಿತರ ಅಂಗಡಿಗಳ ಮೂಲಕ ಬಡತನದ ರೇಖೆಗಿಂತ ಮೇಲಿರುವ ಗ್ರಾಹಕರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸಲಾಗುವುದು. ಗೋಧಿ ಮತ್ತು ಭತ್ತದ ಗಿರಣಿಗಳಿಗೆ ವಿತರಿಸಲು ಟೆಂಡರ್‌ಗಳನ್ನು ಕರೆಯಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಮತ್ತಷ್ಟು
ಹಿಂಸಾಚಾರ ನಿಲ್ಲದಿದ್ದರೆ ಸಿಂಗೂರಿಗೆ 'ಟಾಟಾ'
ಹಣದುಬ್ಬರ ಇಳಿಕೆಗೆ ಹಣಕಾಸು ಸಚಿವಾಲಯ ಪ್ರಯತ್ನ
ಅಮ್ಮನ ಮೊರೆ ಹೋಗಲು ಅಂಬಾನಿಗಳಿಗೆ ಕೋರ್ಟ್ ಸಲಹೆ
ಹಣದುಬ್ಬರ ಶೇ.12.63 ಏರಿಕೆ
ಅನುದಾನ: ಸರಕಾರಕ್ಕೆ ಏರ್‌ ಇಂಡಿಯಾ ಮನವಿ
ವಾರ್ಷಿಕ 2 ಲಕ್ಷ ಕಾರು ರಫ್ತಿಗೆ ಮಾರುತಿ ಯೋಜನೆ