ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಕ್ಕು ದರ ಏರಿಕೆ ಪರಿಶೀಲನೆ ಸದ್ಯಕ್ಕಿಲ್ಲ
ಜಾಗತಿಕ ಮಾರುಕಟ್ಟೆಯಲ್ಲಿ ಉಕ್ಕಿನ ದರ ಸ್ಥಿರವಾಗಿದ್ದರಿಂದ ದೇಶಿಯ ಉಕ್ಕು ಉತ್ಪನ್ನಗಳ ದರ ಏರಿಕೆ ಪರಿಶೀಲನೆ ಸದ್ಯದಲ್ಲಿ ಅಗತ್ಯವಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ

ಜಾಗತಿಕ ಮಾರುಕಟ್ಟೆಯಲ್ಲಿ ಉಕ್ಕು ಉತ್ಪನ್ನಗಳ ದರಗಳು ನಿಯಂತ್ರಣದಲ್ಲಿರುವುದರಿಂದ ದರ ಏರಿಕೆ ಪರಿಶೀಲನೆ ಮಾಡುವಂತಹ ಯಾವುದೇ ಕಾರಣಗಳಿಲ್ಲ. ಆದರೆ ಉಕ್ಕು ಉತ್ಪಾದಕ ಕಂಪೆನಿಗಳು ದರ ಕಡಿಮೆ ಮಾಡುವ ಕುರಿತಂತೆ ಯೋಚಿಸುವುದು ಅಗತ್ಯವಾಗಿದೆ ಎಂದು ಉಕ್ಕು ಇಲಾಖೆಯ ಕಾರ್ಯದರ್ಶಿ ಪಿ.ಕೆ.ರಸ್ತೋಗಿ ತಿಳಿಸಿದ್ದಾರೆ.

ಉಕ್ಕು ಇಲಾಖೆಯ ಕಾರ್ಯದರ್ಶಿ ಪಿ.ಕೆ.ರಸ್ತೋಗಿ ಅವರ ಹೇಳಿಕೆಗೆ ಸಮ್ಮತಿಸಿದ ಭಾರತೀಯ ಉಕ್ಕು ಪ್ರಾಧಿಕಾರದ ಮುಖ್ಯಸ್ಥ ಎಸ್.ಕೆ ರುಂಗ್ಟಾ , ಪ್ರಸ್ತುತ ವಿರುವ ಉಕ್ಕಿನ ದರವನ್ನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.

ಮೇ 7 ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಕ್ಕು ಉತ್ಪಾದಕರು ಫ್ಲ್ಯಾಟ್ ಉಕ್ಕು ಪ್ರತಿ ಟನ್‌ಗೆ 4 ಸಾವಿರ ಹಾಗೂ ಸ್ಟ್ರಕ್ಚರಲ್ ಉಕ್ಕಿಗೆ ಪ್ರತಿಟನ್‌ಗೆ 2 ಸಾವಿರ ದರ ಇಳಿಕೆ ಮಾಡುವುದಾಗಿ ಭರವಸೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಮತ್ತಷ್ಟು
ಶೀಘ್ರವೇ ಗೋಧಿ ಮುಕ್ತ ಮಾರುಕಟ್ಟೆಗೆ -ಪವಾರ್
ಹಿಂಸಾಚಾರ ನಿಲ್ಲದಿದ್ದರೆ ಸಿಂಗೂರಿಗೆ 'ಟಾಟಾ'
ಹಣದುಬ್ಬರ ಇಳಿಕೆಗೆ ಹಣಕಾಸು ಸಚಿವಾಲಯ ಪ್ರಯತ್ನ
ಅಮ್ಮನ ಮೊರೆ ಹೋಗಲು ಅಂಬಾನಿಗಳಿಗೆ ಕೋರ್ಟ್ ಸಲಹೆ
ಹಣದುಬ್ಬರ ಶೇ.12.63 ಏರಿಕೆ
ಅನುದಾನ: ಸರಕಾರಕ್ಕೆ ಏರ್‌ ಇಂಡಿಯಾ ಮನವಿ