ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಉಂಟಾದ ನಿರಂತರ ವಿವಾದದಿಂದ ನ್ಯಾನೊ ಕಾರು ಘಟಕವನ್ನು ಸ್ಥಳಾಂತರಿಸುವ ಉದ್ದೇಶ ಹೊಂದಿದ್ದಲ್ಲಿ ಟಾಟಾ ಮೋಟಾರ್ಸ್‌ಗೆ ಸ್ವಾಗತ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ರತನ್ ಟಾಟಾಗೆ ಅಹ್ವಾನ ನೀಡಿದ್ದಾರೆ.
ಟಾಟಾ ಮೋಟಾರ್ಸ್ ನ್ಯಾನೊ ಕಾರು ಉತ್ಪಾದಕ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸುವುದಾದಲ್ಲಿ ರತ್ನಗಂಬಳಿ ಹಾಸಿ ಸ್ವಾಗತಿಸಿ, ಭೂಮಿ ಹಾಗೂ ಇನ್ನಿತರ ಸೌಕರ್ಯಗಳನ್ನು ಒದಗಿಸುವುದಾಗಿ ಮುಖ್ಯಮಂತ್ರಿ ದೇಶ್‌ಮುಖ್ ಹೇಳಿದ್ದಾರೆ.
ಸಿಂಗೂರ್‌ನಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರ ಮುಂದುವರಿದಲ್ಲಿ ನ್ಯಾನೊ ಘಟಕವನ್ನು ಸ್ಥಳಾಂತರಿಸುವುದಾಗಿ ಹೇಳಿಕೆ ನೀಡಿದ ನಂತರ ಮಹಾರಾಷ್ಟ್ರ ಸರಕಾರ ಈ ಹೇಳಿಕೆ ನೀಡಿದೆ.
ಜಗತ್ತಿನಲ್ಲಿಯೇ ಅತಿ ಕಡಿಮೆ ಬೆಲೆಯ ಕಾರನ್ನು ವರ್ಷಾಂತ್ಯದೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಅಶ್ವಾಸನೆ ನೀಡಿದ ಟಾಟಾ, ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿರುವ ಸಣ್ಣ ಕಾರು ಉತ್ಪಾದಕ ಘಟಕಕ್ಕೆ ಈಗಾಗಲೇ 1500 ಕೋಟಿ ರೂ. ಹೂಡಿಕೆ ಮಾಡಿದೆ.
|