ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಬೆದರಿಕೆ: ಪ್ರಣಬ್-ಬುದ್ದದೇವ್ ಮಾತುಕತೆ
ಸಿಂಗೂರ್‌ನಿಂದ ನ್ಯಾನೊ ಕಾರು ಫತ್ಪಾದಕ ಘಟಕವನ್ನು ಸ್ಥಳಾಂತರಿಸುವುದಾಗಿ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ ಉಭಯ ನಾಯಕರು, ಟಾಟಾ ಅವರ ನ್ಯಾನೊ ಕಾರು ಉತ್ಪಾದಕ ಘಟಕ ಸ್ಥಳಾಂತರ ಕುರಿತಂತೆ ಚರ್ಚಿಸಲಾಯಿತು ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಅವರ ಜೊತೆಯಲ್ಲಿ ಆಗಮಿಸಿದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಬೋಸ್ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದ ವಿವಿಐಪಿ ಕೊಠಡಿಯಲ್ಲಿ ಮುಖ್ಯಮಂತ್ರಿ ಬುದ್ದದೇವ್ ಅವರೊಂದಿಗೆ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ನ್ಯಾನೊ ಕಾರು ಉತ್ಪಾದಕ ಘಟಕವನ್ನು ಸ್ಥಳಾಂತರಿಸಬೇಕೊ ಅಥವಾ ಬೇಡವೊ ಎನ್ನುವ ನಿರ್ಧಾರ ಟಾಟಾ ಅವರಿಗೆ ಸೇರಿದ್ದರಿಂದ ನಾನು ಹೆಚ್ಚಿಗೆ ಹೇಳಲು ಬಯಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಚಿವ ಮುಖರ್ಜಿ ತಿಳಿಸಿದ್ದಾರೆ.
ಮತ್ತಷ್ಟು
ಅಮೆರಿಕದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ- ವಾರೆನ್
ಮಹಾರಾಷ್ಟ್ರಕ್ಕೆ ಬಂದರೆ ಟಾಟಗೆ ಸ್ವಾಗತ: ದೇಶ್‌ಮುಖ್
ಕಚ್ಚಾ ತೈಲ ದರಗಳಲ್ಲಿ ಶೇ 5.4ರಷ್ಟು ಕುಸಿತ
ಉಕ್ಕು ದರ ಏರಿಕೆ ಪರಿಶೀಲನೆ ಸದ್ಯಕ್ಕಿಲ್ಲ
ಶೀಘ್ರವೇ ಗೋಧಿ ಮುಕ್ತ ಮಾರುಕಟ್ಟೆಗೆ -ಪವಾರ್
ಹಿಂಸಾಚಾರ ನಿಲ್ಲದಿದ್ದರೆ ಸಿಂಗೂರಿಗೆ 'ಟಾಟಾ'