ನ್ಯಾನೊ ಕಾರು ಉತ್ಪಾದಕ ಘಟಕಕ್ಕಾಗಿ ಭೂಮಿಯನ್ನು ಕಳೆದುಕೊಂಡ ರೈತರು , ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ನ್ಯಾನೊ ಘಟಕವನ್ನು ಸ್ಥಳಾಂತರಿಸುವುದು ಬೇಡ ಎಂದು ಹೇಳಿಕೆ ನೀಡಿ ಮತ್ತೊಂದು ತಿರುವು ನೀಡಿದ್ದಾರೆ.
ಪ್ರತಿಭಟನೆ ಹಾಗೂ ಹಿಂಸಾಚಾರ ನಿರಂತರವಾಗಿ ಮುಂದುವರಿದಲ್ಲಿ ನ್ಯಾನೊ ಕಾರು ಉತ್ಪಾದಕ ಘಟಕವನ್ನು ಸ್ಥಳಾಂತರಿಸುವುದಾಗಿ ರತನ್ ಟಾಟಾ ಹೇಳಿಕೆ ನೀಡಿದ ಬೆನ್ನಲ್ಲೆ ರೈತರ ಹೇಳಿಕೆ ಹೊರಬಿದ್ದಿದೆ.
ನ್ಯಾನೊ ಕಾರು ಉತ್ಪಾದಕ ಘಟಕಕ್ಕಾಗಿ ನನ್ನ 0.75ಏಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಇಲ್ಲಿಯವರೆಗೆ ಹಣಪಡೆದಿಲ್ಲ.ಭೂಸ್ವಾಧೀನದ ವಿರುದ್ದ ಇಲ್ಲಿಯವರೆಗೆ ಹೋರಾಟ ನಡೆಸಿದ್ದು ಕೈಗಾರಿಕರಣ ಅಗತ್ಯವಾಗಿದೆ ಎಂದು ರೈತ ದೇಬಪ್ರಸಾದ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಜಮಿ ರಕ್ಷಾ ಸಮಿತಿಯ ಕಾರ್ಯಕರ್ತರು ನ್ಯಾನೊ ಕಾರು ಉತ್ಪಾದಕ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಘಟಕ ಕಾರ್ಯಾರಂಭ ಮಾಡಿದಲ್ಲಿ ನಮ್ಮ ಸ್ಥಿತಿಗತಿ ಸುಧಾರಿಸುತ್ತದೆ. ಟಾಟಾ ಮೋಟಾರ್ಸ್ ನಿರ್ಗಮಿಸಿದಲ್ಲಿ ಜನತೆಗೆ ನೋವಾಗಲಿದೆ ಎಂದು ದಾಸ್ ಹೇಳಿದ್ದಾರೆ.
ಮತ್ತೊಬ್ಬ ರೈತ ಹಾಗೂ ತೃಣಮೂಲ ಕಾಂಗ್ರೆಸ್‌ನ ಜಿಲ್ಲಾ ಪಂಚಾಯತ್ ಸದಸ್ಯ ಮಾಣಿಕ್ ದಾಸ್ ಬಾರಾಬೆರ್ರಿ ಮಾತನಾಡಿ, ನನ್ನ ಭೂಮಿಯನ್ನು ಕಾರು ಉತ್ಪಾದಕ ಘಟಕಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಯೋಜನೆ ಫಲವತ್ತಾದ ಭೂಮಿಯನ್ನು ಹೊರತುಪಡಿಸಿದ್ದಾಗಿರಬೇಕು . ಘಟಕವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು. ಎಂದು ಹೇಳಿದ್ದಾರೆ.
|