ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೇತನ ಹೆಚ್ಚಳವನ್ನು ನುಂಗಿದ ಹಣದುಬ್ಬರ
ಏರುಮುಖವಾಗೇ ಸಾಗುತ್ತಿರುವ ಹಣದುಬ್ಬರವು ಕಂಪೆನಿಗಳ ವೇತನಗಳ ಮೇಲೆ ಪರಿಣಾಮ ಬೀಳಲಿದ್ದು, ಐಟಿ ಸಿಬ್ಬಂದಿಗಳು ದೊಡ್ಡ ಹೊಡೆತ ಅನುಭವಿಸಲಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮಾನವ ಸಂಪನ್ಮೂಲ ಸಂಘಟನೆಗಳು ನಡೆಸಿರುವ ಸಮೀಕ್ಷಯ ಪ್ರಕಾರ ಮುಂದಿನ ವರ್ಷ ಐಟಿ ವಲಯವು ಅತ್ಯಂತ ಕಡಿಮೆ ವೇತನ ಏರಿಕೆಯನ್ನು ಕಾಣಲಿದೆ. ಈ ವಲಯದ ವೇತನ ಏರಿಕೆಯು ಶೇ11.2ಕ್ಕಿಳಿಯಲಿದೆ. 2008ರಲ್ಲಿ ವೇತನ ಏರಿಕೆ ಪ್ರಮಾಣ ಶೇ.12.5 ಆಗಿತ್ತು.

ಸಮೀಕ್ಷೆಗೆ ಭಾರತದ 150 ಪ್ರಮುಖ ಕಂಪೆನಿಗಳನ್ನು ಆಯ್ದುಕೊಳ್ಳಲಾಗಿದ್ದು, ಏರುತ್ತಿರುವ ಹಣದುಬ್ಬರ ಮತ್ತು ಕಚ್ಚಾವಸ್ತುಗಳ ಬೆಲೆ ಏರಿಕೆಯು ಸಿಬ್ಬಂದಿಗಳ ವೇತನದ ಮೇಲೆ ಪರಿಣಾಮ ಬೀರಲಿದೆ ಎಂಬ ಅಂಶ ಹೊರಬಿದ್ದಿದೆ.

ಜಾಗತಿಕ ಆರ್ಥಿಕ ಹಿಂಜರಿತವಿದ್ದರೂ, 2007ರಲ್ಲಿ ಐಟಿ ಸಂಸ್ಥೆಗಳು ಶೇ.15.4ರಷ್ಟು ವೇತನ ಏರಿಕೆ ಮಾಡಿದ್ದವು. ಆದರೆ ಈ ವರ್ಷ ಏರಿಕೆಯ ಪ್ರಮಾಣ ಇಳಿಮುಖವಾಗಿದೆ.
ಮತ್ತಷ್ಟು
ಬಿಎಸ್‌ಎನ್‌ಎಲ್ ಖಾಸಗೀಕರಣವಿಲ್ಲ -ಸಿಂಧಿಯಾ
ಸಿಂಗೂರ್ : ಟಾಟಾ ನಿರ್ಗಮನಕ್ಕೆ ರೈತರ ವಿರೋಧ
ಟಾಟಾ ಬೆದರಿಕೆ: ಪ್ರಣಬ್-ಬುದ್ದದೇವ್ ಮಾತುಕತೆ
ಅಮೆರಿಕದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ- ವಾರೆನ್
ಮಹಾರಾಷ್ಟ್ರಕ್ಕೆ ಬಂದರೆ ಟಾಟಗೆ ಸ್ವಾಗತ: ದೇಶ್‌ಮುಖ್
ಕಚ್ಚಾ ತೈಲ ದರಗಳಲ್ಲಿ ಶೇ 5.4ರಷ್ಟು ಕುಸಿತ