ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
PTI
ನ್ಯಾನೋ ಕಾರು ಉತ್ಪಾದನಾ ಘಟವನ್ನು ಸಿಂಗೂರಿನಿಂದ ಸ್ಥಳಾಂತರಿಸುವಂತೆ ಒತ್ತಾಯಿಸಿ, ಪಶ್ಚಿಮ ಬಂಗಾಳದ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ಸಿಂಗೂರು ಟಾಟಾ ಘಟಕದ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಸಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜ್ಯದೊಳಕ್ಕೆ ಸಂಚರಿಸುವ ವಾಹನಗಳ ರಸ್ತೆ ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ.

"ತೃಣಮೂಲ ಕಾಂಗ್ರೆಸ್‍ನ ಮುಷ್ಕರದಿಂದಾಗಿ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 17 ನಲ್ಲಿ ಟ್ರಾಫಿಕ್ ಸಮಸ್ಯೆ ಉದ್ಭವಿಸಿದೆ. ದೂರದ ಊರುಗಳಿಂದ ಬರುವ ಹಲವಾರು ವಾಹನಗಳು ತಮ್ಮ ದಾರಿ ಬದಲಾಯಿಸಬೇಕಾಗಿ ಬಂದಿದೆ" ಎಂದು ಹೂಗ್ಲೀ ಜಿಲ್ಲಾ ಪೋಲೀಸ್ ಮುಖ್ಯಸ್ಥ ರಾಜೀವ್ ಮಿಶ್ರ ತಿಳಿಸಿದ್ದಾರೆ.

ಮುಷ್ಕರದಿಂದಾಗಿ ಹೂಗ್ಲಿ ಜಿಲ್ಲೆಯಲ್ಲಿನ ದುರ್ಗಾಪುರ್ ಹೆದ್ದಾರಿಯನ್ನು ಸಂಪೂರ್ಣ ನಿಲ್ಲಿಸಬೇಕಾಗಿ ಬಂದಿದೆ, ಹಲವಾರು ಟ್ರಕ್ಕುಗಳು ಜಿಲ್ಲೆಯೊಳಕ್ಕೆ ಪ್ರವೇಶಿಸಲಾಗದೇ ಅರ್ಧದಲ್ಲೇ ನಿಲುಗಡೆ ಮಾಡಿವೆ ಎಂದು ಮಿಶ್ರ ಹೇಳಿದ್ದಾರೆ.

ತೃಣಮೂಲ ನೇತೃತ್ವದ ಕೃಷಿಜಮಿ ಜಿಬಾನ್ ಜಿಬಿಕಾ ರಕ್ಷಾ ಸಮಿತಿ(ಕೆಜೆಜೆಆರ್ಸಿ)ಯು ಕೃಷಿ ಭೂಮಿಯನ್ನು ಟಾಟಾ ಯೋಜನೆಗೋಸ್ಕರ ವಶಪಡಿಸಿಕೊಂಡ ಕ್ರಮವನ್ನು ಖಂಡಿಸಿದೆ, ಮತ್ತು ಭಾನುವಾರದಿಂದ ಸಿಂಗೂರು ಕಾರ್ಖಾನೆಯ ಬಳಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಟಾಟಾ ಕಂಪೆನಿಯ ನ್ಯಾನೋ ಕಾರು ಉತ್ಪಾದನಾ ಯೋಜನೆಗೆ ರೈತರಿಂದ ಬಲವಂತವಾಗಿ ವಶಪಡಿಸಿಕೊಂಡಿರುವ 400 ಎಕರೆ ಭೂಮಿಯನ್ನು ವಾಪಾಸು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಒಟ್ಟು 997.11 ಎಕರೆ ಪ್ರದೇಶವನ್ನು ಈ ಉದ್ದೇಶಕ್ಕೋಸ್ಕರ ಟಾಟಾ ಕಂಪೆನಿಗೆ ನೀಡಲಾಗಿದ್ದು ಇದರಲ್ಲಿ 691.66 ಎಕರೆ ಪ್ರದೇಶವನ್ನು ರೈತರು ತಮ್ಮ ಸ್ವ ಇಚ್ಛೆಯಿಂದ ನೀಡಿದ್ದಾರೆ.

"ಈ ಪ್ರತಿಭಟನಾ ಕಾರ್ಯಕ್ರಮದಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ ಎಂಬ ವಾದವನ್ನು ನಾವು ಒಪ್ಪಲಾರೆವು. ನಾವು ತುರ್ತು ವಾಹನಗಳನ್ನು ದುರ್ಗಾಪುರ ಹೆದ್ದಾರಿಯ ಮೂಲಕ ಸಂಚರಿಸಲು ಅನುವುಮಾಡಿಕೊಡುತ್ತಿದ್ದೇವೆ. ಆದರೆ ನಾವು ಜನರಲ್ಲಿ ಈ ಪ್ರಾಮುಖ್ಯ ಚಳುವಳಿ ಸಮಯದಲ್ಲಿ ಸಹಿಸುವಂತೆ ವಿನಂತಿಸಿಕೊಳ್ಳುತ್ತಿದ್ದೇವೆ" ಎಂದು ಹಿರಿಯ ತೃಣಮೂಲ ಕಾಂಗ್ರೆಸ್ ನೇತಾರ ಮದನ್ ಮಿತ್ರ ಕೇಳಿಕೊಂಡಿದ್ದಾರೆ.

ಸಂಚಾರಿಗಳಿಗಾದ ಅಡ್ಡಿಗಿಂತಲೂ ರಾಜ್ಯ ಸರಕಾರ ಬಲವಂತವಾಗಿ ಜಮೀನು ವಶಪಡಿಸಿಕೊಂಡಿರುವ ಸಿಂಗೂರಿನ ರೈತರ ಸಮಸ್ಯೆ ದೊಡ್ಡದಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.
ಮತ್ತಷ್ಟು
ವೇತನ ಹೆಚ್ಚಳವನ್ನು ನುಂಗಿದ ಹಣದುಬ್ಬರ
ಬಿಎಸ್‌ಎನ್‌ಎಲ್ ಖಾಸಗೀಕರಣವಿಲ್ಲ -ಸಿಂಧಿಯಾ
ಸಿಂಗೂರ್ : ಟಾಟಾ ನಿರ್ಗಮನಕ್ಕೆ ರೈತರ ವಿರೋಧ
ಟಾಟಾ ಬೆದರಿಕೆ: ಪ್ರಣಬ್-ಬುದ್ದದೇವ್ ಮಾತುಕತೆ
ಅಮೆರಿಕದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ- ವಾರೆನ್
ಮಹಾರಾಷ್ಟ್ರಕ್ಕೆ ಬಂದರೆ ಟಾಟಗೆ ಸ್ವಾಗತ: ದೇಶ್‌ಮುಖ್