ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ದಿಮೆ ಡೀಸೆಲ್ ಬೆಲೆ 57 ರೂ.ಗೆ ಏರುವ ಸಂಭವ
ಸರಕಾರೀ ಸಾಮ್ಯದ ಮೂರು ತೈಲ ಸಂಸ್ಥಗಳು ಔದ್ಯಮಿಕ ವಲಯಗಳಿಗೆ ಡೀಸೆಲ್ ಬೆಲೆಯನ್ನು ಈಗಗಿನ 34.80 ರೂ,ಗಳಿಂದ ಪ್ರತಿ ಲೀಟರಿಗೆ 57 ರೂಪಾಯಿಗಳಂತೆ ನಿಗದಿ ಪಡಿಸುವಂತೆ ಪೆಟ್ರೋಲಿಯಂ ಸಚಿವಾಲಯವನ್ನು ಒತ್ತಾಯಿಸಿವೆ.

ವಿಶೇಷ ಸಹಾಯಧನ ಬೆಲೆಯ ಇಂಧನವನ್ನು ಕೇವಲ ಕೃಷಿ ಮತ್ತು ಸಾರಿಗೆ ಕ್ಷೇತ್ರಗಳಿಗೆ ಮಾತ್ರ ಮೀಸಲಾಗಿಟ್ಟು, ನೇರ ಬಳಕೆದಾರರಾದ ರೈಲ್ವೇ ಮತ್ತು ಇಂಧನ ಉತ್ಪಾದನಾ ಘಟಕಗಳನ್ನು ಇದರಿಂದ ಹೊರಗಿಡುವಂತೆ ಈ ಕಂಪೆನಿಗಳು ಪೆಟ್ರೋಲಿಯಂ ಸಚಿವಾಲಯವನ್ನು ಒತ್ತಾಯಿಸಿವೆ.

ಔದ್ಯಮಿಕ ವಲಯಗಳಾದ ಇಂಧನ ಉತ್ಪಾದನಾ ಘಟಕಗಳು ಮುಕ್ತ ಬೆಲೆಯ ಇಂಧನ ಮತ್ತು ನಾಫ್ತಾಗಳಿಗಿಂತ ಕಡಿಮೆ ಬೆಲೆಗೆ ಸಹಾಯಧನದ ಡೀಸೆಲ್ ಪಡೆದುಕೊಳ್ಳುತ್ತಿರುವುದರಿಂದ ಅವರ ಆವಶ್ಯಕತೆಗೆಳನ್ನು ನೀಗಿಸಲು ತೈಲ ಸಂಸ್ಕರಣಾ ಘಟಕದಿಂದ ತೈಲ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ.

ಕಳೆದ ವಾರ ನಡೆದ ಸಭೆಯೊಂದರಲ್ಲಿ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವೋರಾ ಅವರು ಬೆಳೆಯುತ್ತಿರುವ ಇಂಧನ ಸ್ಥಾವರಗಳ ಕಾರಣದಿಂದಾಗಿ ಎಪ್ರಿಲ್ ಜುಲೈ ಮಧ್ಯೆ 18 ಪ್ರತಿಶತದಷ್ಟು ಇಂಧನ ಬೇಡಿಕೆ ಹೆಚ್ಚಿದೆ ಮತ್ತು ಇದು ಇಂಧನ ಕೊರತೆಗೆ ಕಾರಣವಾಗಿದೆ ಎಂದು ತಿಳಿಸಿದ್ದರು.

ಮೊದಲ ತ್ರೈಮಾಸಿಕದಲ್ಲಿ ವಿದ್ಯುತ್ ಸ್ಥಾವರಗಳ ಬೇಡಿಕೆಯಲ್ಲಿ ಒಟ್ಟು 152 ಪ್ರತಿಶತಗಳಷ್ಟು ಹೆಚ್ಚಳ ಕಂಡಿದೆ, ಅದೇ ವೇಳೆ ನೌಕಾ ಸಂಬಂಧಿ ಮತ್ತು ಮೀನುಗಾರಿಕಾ ವಲಯದಲ್ಲಿ ಇದು 40 ಶೇಕಡಾದಷ್ಟು ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಡೀಸೆಲ್ ಬೆಲೆಯಲ್ಲಿ ಬದಲಾವಣೆ ಮಾಡುವುದರಿಂದ 2008-09 ರಲ್ಲಿ ವಾರ್ಷಿಕ 27,202 ಕೋಟಿಯಷ್ಟು ಆದಾಯಕ್ಕೆ ಪೆಟ್ಟು ಬೀಳಲಿದೆ.

ಸರಕಾರೀ ಸಾಮ್ಯದ ಕಂಪೆನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಡೀಸೆಲ್ ಮಾರಟದಲ್ಲಿ ಪ್ರತಿ ಲೀಟರ್‌ಗೆ 16.22 ರೂ.ಗಳಷ್ಟು ಅನುಭವಿಸುತ್ತಿದೆ. 2009 ರ ಆರ್ಥಿಕ ವರ್ಷದಲ್ಲಿ ಪೆಟ್ರೋಲ್ ,ಸೀಮೆ ಎಣ್ಣೆ ಡೀಸಲ್ ಮತ್ತು ಎಲ್‌‍ಪಿಜಿ ಮಾರಾಟದಲ್ಲಿ ಊಹಿಸಲಾಗಿರುವ 1,84,801 ಕೋಟಿ ರೂ. ನಷ್ಟದ ಅರ್ಧದಷ್ಟು ಡೀಸೆಲ್ ಮಾರಾಟದಿಂದ ಉಂಟಾಗಲಿದೆ.

ಪ್ರಕಾರ ಪೆಟ್ರೋಲಿಯಂ ಖಾತೆಯು ಈ ವಿಷಯವನ್ನು ಪರಿಶೀಲಿಸುತ್ತಿದ್ದು ವಿಭಿನ್ನ ಬೆಲೆ ನಿಗದಿ ಯೋಜನೆಗೆ ಸಂಪುಟ ಅನುಮೋದನೆ ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ವೇತನ ಹೆಚ್ಚಳವನ್ನು ನುಂಗಿದ ಹಣದುಬ್ಬರ
ಬಿಎಸ್‌ಎನ್‌ಎಲ್ ಖಾಸಗೀಕರಣವಿಲ್ಲ -ಸಿಂಧಿಯಾ
ಸಿಂಗೂರ್ : ಟಾಟಾ ನಿರ್ಗಮನಕ್ಕೆ ರೈತರ ವಿರೋಧ
ಟಾಟಾ ಬೆದರಿಕೆ: ಪ್ರಣಬ್-ಬುದ್ದದೇವ್ ಮಾತುಕತೆ
ಅಮೆರಿಕದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ- ವಾರೆನ್