ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಮೋಟಾರ್ಸ್ ಕಾರ್ಯಕ್ಕೆ ಅಡ್ಡಿ
ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿ ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ, ಗುತ್ತಿಗೆ ಆಧಾರಿತ ಸಿಬ್ಬಂದಿಗಳು ಕರ್ತವ್ಯ ವಿಮುಖರಾಗಿದ್ದ ಕಾರಣ ಸಿಂಗೂರಿನಲ್ಲಿನ ಟಾಟಾ ಮೋಟಾರ್ಸ್ ಸಣ್ಣಕಾರು ಫ್ಯಾಕ್ಟರಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಕಂಪೆನಿ ಅಧಿಕಾರಿಗಳ ಹಾಜರಿ ಸಹಜವಾಗಿತ್ತು, ಆದರೆ ಗುತ್ತಿಗೆ ಆಧಾರಿತ ಕಾರ್ಮಿಕ ಹಾಜರಿಯಲ್ಲಿ ಕುಸಿತ ಕಂಡಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ನ್ಯಾನೋ ಕಾರನ್ನು ಅಕ್ಟೋಬರ್ ತಿಂಗಳಿನಲ್ಲಿ ರಸ್ತೆಗಿಳಿಸುವ ಗಡುವು ಸಮೀಪಿಸುತ್ತಿದ್ದು, ಕಾರು ಉತ್ಪಾದನೆಯಲ್ಲಿ ಇದೀಗಾಗಲೇ ವಿಳಂಬ ಉಂಟಾಗಿದ್ದು, ಸತತ ಅಡೆತಡೆ ಮತ್ತು ಕಚ್ಚಾವಸ್ತುಗಳ ಬೆಲೆಏರಿಕೆಯನ್ನೂ ಕಂಪೆನಿ ಎದುರಿಸುತ್ತಿದೆ.

ಹಿಂಸಾಚಾರ ಮುಂದುವರಿದರೆ ಮತ್ತು ಉತ್ಪಾದನಾ ಕಾರ್ಯಕ್ಕೆ ನಿರಂತರ ಅಡೆತಡೆಗಳು ಮುಂದುವರಿದರೆ, ಯೋಜನೆಯನ್ನು ಸಿಂಗೂರಿನಿಂದ ಇತರೆಡೆಗೆ ವರ್ಗಾಯಿಸುವುದಾಗಿ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಕಳೆದ ವಾರವಷ್ಟೆ ಬೆದರಿಕೆ ಹಾಕಿದ್ದರು.

ಬಲವಂತದಿಂದ ಕಸಿದುಕೊಂಡಿರುವ ರೈತರ ಭೂಮಿಯನ್ನು ಮರಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟವಾಕಾರರು ಕಾರ್ಖಾನೆಯ ಮುಖ್ಯ ಗೇಟಿನೆದುರು ಜಮಾಯಿಸಿದ್ದಾರೆ.
ಮತ್ತಷ್ಟು
ಉದ್ದಿಮೆ ಡೀಸೆಲ್ ಬೆಲೆ 57 ರೂ.ಗೆ ಏರುವ ಸಂಭವ
ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ವೇತನ ಹೆಚ್ಚಳವನ್ನು ನುಂಗಿದ ಹಣದುಬ್ಬರ
ಬಿಎಸ್‌ಎನ್‌ಎಲ್ ಖಾಸಗೀಕರಣವಿಲ್ಲ -ಸಿಂಧಿಯಾ
ಸಿಂಗೂರ್ : ಟಾಟಾ ನಿರ್ಗಮನಕ್ಕೆ ರೈತರ ವಿರೋಧ
ಟಾಟಾ ಬೆದರಿಕೆ: ಪ್ರಣಬ್-ಬುದ್ದದೇವ್ ಮಾತುಕತೆ