ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್‌ನಿಂದ ಜಾದೂ ರೀಚಾರ್ಜ್
ಸಣ್ಣ ಮತ್ತು ಮಧ್ಯಮ ಉದ್ದಿಮೆದಾರ ಗ್ರಾಹಕರನ್ನು ಗುರಿಯಾಗಿಸಿ, ಅನಿಲ್ ಅಂಬಾನಿ ಸಮೂಹದ ರಿಲಯನ್ಸ್ ಕಮ್ಯುನಿಕೇಶನ್, ಸೋಮವಾರ 'ಬ್ಯುಸಿನೆಸ್ ಜಾದೂ 135 ಪ್ಯಾಕ್' ಎಂಬ ಹೊಸ ರೀಚಾರ್ಜ್ ಕೂಪನ್ ಬಿಡುಗಡೆಗೊಳಿಸಿದೆ.

ಈ ರೀಚಾರ್ಜ್ ಮೂಲಕ, ಇದರ ಸಮೂಹ ವ್ಯಾಪ್ತಿಗೆ ಬರುವ ಗ್ರಾಹಕರ ಬಳಗದೊಂದಿಗೆ ಉಚಿತವಾಗಿ ಮಾತನಾಡಬಹುದಾಗಿದೆ. ಈ ಯೋಜನೆಯನ್ನು ಪ್ರಯೋಗಾರ್ಥ ತಮಿಳ್ನಾಡು ವಲಯದಲ್ಲಿ ಸೋಮವಾರ ಆರಂಭಿಸಲಾಗಿದ್ದು, ಇಲ್ಲಿನ ರಿಲಯನ್ಸ್ ಗ್ರಾಹಕರು ಇತರ ಇತರ ರಿಲಯನ್ಸ್ ಗ್ರಾಹಕರೊಂದಿಗೆ ಉಚಿತವಾಗಿ ಮಾತನಾಡಬಹುದಾಗಿದೆ.

135 ರೂಪಾಯಿಗಳ ಈ ಜಾದೂ ರೀಚಾರ್ಜ್ ಮೂಲಕ ರಾಜ್ಯದ್ಯಂತ ಅನಿಯಮಿತವಾಗಿ ರಿಲಯನ್ಸ್ ಮೊಬೈಲ್‌ಗಳಿಗೆ ಉಚಿತ ಕರೆ ಮಾಡಬಹುದಾಗಿದೆ ಎಂದು ರಿಲಯನ್ಸ್ ಕಮ್ಯುನಿಕೇಶನ್ಸ್‌ನ ಸಿಇಒ(ತಮಿಳ್ನಾಡು ವೃತ್ತ) ಅಜಯ್ ಅಶ್ವಥಿ ಹೇಳಿದ್ದಾರೆ.

ಕಂಪೆನಿಯು ಚೆನ್ನೈಯಲ್ಲಿ 7.68 ದಶಲಕ್ಷ ಬಳಕೆದಾರರನ್ನು ಹೊಂದಿದೆ ಎಂದು ತಿಳಿಸಿದ ಅವರು, ಇವರಲ್ಲಿ ಶೇ.92 ಮಂದಿ ಪ್ರೀ ಪೇಯ್ಡ್ ಗ್ರಾಹಕರಾಗಿದ್ದಾರೆ ಎಂದು ನುಡಿದರು.

ಗ್ರಾಹಕರ ಪ್ರತಿಸ್ಪಂದನೆಯ ಆಧಾರದಲ್ಲಿ ಈ ಯೋಜನೆಯನ್ನು ಇತರೆಡೆಗೂ ವಿಸ್ತರಿಸಲಾಗುವುದು ಎಂದು ಅವರು ನುಡಿದರು.
ಮತ್ತಷ್ಟು
ಟಾಟಾ ಮೋಟಾರ್ಸ್ ಕಾರ್ಯಕ್ಕೆ ಅಡ್ಡಿ
ಉದ್ದಿಮೆ ಡೀಸೆಲ್ ಬೆಲೆ 57 ರೂ.ಗೆ ಏರುವ ಸಂಭವ
ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ವೇತನ ಹೆಚ್ಚಳವನ್ನು ನುಂಗಿದ ಹಣದುಬ್ಬರ
ಬಿಎಸ್‌ಎನ್‌ಎಲ್ ಖಾಸಗೀಕರಣವಿಲ್ಲ -ಸಿಂಧಿಯಾ
ಸಿಂಗೂರ್ : ಟಾಟಾ ನಿರ್ಗಮನಕ್ಕೆ ರೈತರ ವಿರೋಧ