ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರ್ತಿ ಏರ್‌ಟೆಲ್‌ಗೆ ಅತಿಹೆಚ್ಚು ಗ್ರಾಹಕರು
ದೇಶದಲ್ಲಿ ಮೊಬೈಲ್ ಅಭಿವೃದ್ಧಿಯು ಶೀಘ್ರಪಥದಲ್ಲೇ ಸಾಗುತ್ತಿದ್ದು, ಕಳೆದ ಎರಡು ತಿಂಗಳುಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲೇ ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿದೆ.

ಜುಲೈ ತಿಂಗಳಲ್ಲಿ ಜಿಎಸ್ಎಂ ಮತ್ತು ಸಿಡಿಎಂ ಮೊಬೈಲ್ ಗ್ರಾಹಕರ ಸಂಖ್ಯೆಯು 9.22 ದಶಲಕ್ಷಕ್ಕೇರಿದ್ದು, ಈವರೆಗೆ ಕೇವಲ ಒಂದು ತಿಂಗಳಲ್ಲೇ ಇಷ್ಟೊಂದು ಏರಿಕೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮೊದಲ ಗರಿಷ್ಠ ಏರಿಕೆಯು 8.94 ದಶಲಕ್ಷದಷ್ಟಾಗಿತ್ತು.

ಸುಮಾರು 2.69 ದಶಲಕ್ಷ ಗ್ರಾಹಕರನ್ನು ಹೊಂದುವುದರೊಂದಿಗೆ, ಭಾರ್ತಿ ಏರ್‌ಟೆಲ್ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಅವಧಿಯಲ್ಲಿ ವೊಡಾಫೋನ್ ಎಸ್ಸಾರ್ 1.7 ದಶಲಕ್ಷ ಮತ್ತು ರಿಲಯನ್ಸ್ ಕಮ್ಯುನಿಕೇಶನ್ಸ್ 1.5 ದಶಲಕ್ಷ ಗ್ರಾಹಕರನ್ನು ಪಡೆದುಕೊಂಡಿದೆ. ಟಾಟಾ ಟೆಲಿಸರ್ವೀಸ್ ಮತ್ತು ಐಡಿಯಾ ಸೆಲ್ಯುಲರ್ ಜುಲೈ ತಿಂಗಳಲ್ಲಿ ದಶಲಕ್ಷ ಗ್ರಾಹಕರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪ್ರತಿ ತಿಂಗಳಲ್ಲಿ ಗರಿಷ್ಠ ಸಂಖ್ಯೆಯ ನಿಸ್ತಂತು ಗ್ರಾಹಕರನ್ನು ಒಳಗೊಳ್ಳುವುದರೊಂದಿಗೆ, ಚೀನಾದೊಂದಿಗೆ ಭಾರತದಲ್ಲೂ ಮೊಬೈಲ್ ಮಾರುಕಟ್ಟೆಯು ವೃದ್ಧಿಯಾಗುತ್ತಿದೆ. ನೂತನ ನಿರ್ವಾಹಕರು ಸದ್ಯದಲ್ಲಿಯೇ ತಮ್ಮ ಸೇವೆಯನ್ನು ಪ್ರಾರಂಭಿಸಲಿರುವುದರಿಂದ, ನಿಸ್ತಂತು ವಲಯದ ಗ್ರಾಹಕರ ಸಂಖ್ಯೆಯು ಹತ್ತು ದಶಲಕ್ಷಕ್ಕೆ ಏರುವ ಸಾಧ್ಯತೆ ಇದೆ.

ವೀಡಿಯೋಕಾನ್ ಯುನಿಟೆಕ್, ರಿಲಯನ್ಸ್, ಟಾಟಾ ಟೆಲಿಸರ್ವೀಸ್ಈ ವರ್ಷಾಂತ್ಯದೊಳಗೆ ಜಿಎಸ್ಎಂ ಮೊಬೈಲ್ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿವೆ.
ಮತ್ತಷ್ಟು
ರಿಲಯನ್ಸ್‌ನಿಂದ ಜಾದೂ ರೀಚಾರ್ಜ್
ಟಾಟಾ ಮೋಟಾರ್ಸ್ ಕಾರ್ಯಕ್ಕೆ ಅಡ್ಡಿ
ಉದ್ದಿಮೆ ಡೀಸೆಲ್ ಬೆಲೆ 57 ರೂ.ಗೆ ಏರುವ ಸಂಭವ
ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ವೇತನ ಹೆಚ್ಚಳವನ್ನು ನುಂಗಿದ ಹಣದುಬ್ಬರ
ಬಿಎಸ್‌ಎನ್‌ಎಲ್ ಖಾಸಗೀಕರಣವಿಲ್ಲ -ಸಿಂಧಿಯಾ