ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಕ್ಸನ್ ಖರೀದಿಗೆ ಮುಂದಾದ ಇನ್ಫೋಸಿಸ್
ಲಂಡನ್ ಮೂಲದ ತಂತ್ರಜ್ಞಾನ ಕಂಪನಿ ಆಕ್ಸಾನ್ ಗ್ರೂಪ್‌ನ್ನು 3,310 ಕೋಟಿ ರೂಪಾಯಿಗಳಿಗಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್ ಖರೀದಿಸಲು ಮುಂದಾಗಿದ್ದು, ಇದು ಭಾರತದ ಕಂಪನಿಯಿಂದ ಅತಿ ದೊಡ್ಡ ವಿದೇಶಿ ಕಂಪನಿ ಸ್ವಾಧೀನವಾಗಲಿದೆ.

ಲಂಡನ್ ಶೇರು ಮಾರುಕಟ್ಟೆಯಲ್ಲಿ ಆಕ್ಸನ್‌ನ ಪ್ರತಿ ಶೇರಿನ ಬೆಲೆಯನ್ನು ಇನ್ಫೋಸಿಸ್ 11.12ರಷ್ಟು ನಿಗದಿಪಡಿಸಿದ್ದು, ಇದು ಕಳೆದ ಶುಕ್ರವಾರ ಅಂತ್ಯಗೊಂಡ ಶೇ.19ರಷ್ಟು ಮತ್ತು ಆರು ತಿಂಗಳ ಸರಾಸರಿ ಶೇ.33ಕ್ಕಿಂತ ಹೆಚ್ಚಾಗಿದೆ.

ಸುಮಾರು 2000 ನೌಕರರನ್ನು ಹೊಂದಿರುವ ಆಕ್ಸನ್‌ನ ವಾರ್ಷಿಕ ಆದಾಯವು 204 ದಶಲಕ್ಷ ಪೌಂಡ್‌ಗಳಾಗಿದ್ದು, ತೆರಿಗೆ ಕಡಿತದ ನಂತರ, ಡಿಸೆಂಬರ್ 31 2007ರ ಅವಧಿಯಲ್ಲಿ 20.2 ದಶಲಕ್ಷ ಪೌಂಡ್ ಆದಾಯ ಗಳಿಸಿದೆ. ಪ್ರತಿವರ್ಷ ಆಕ್ಸನ್ ಆದಾಯವು ಶೇ.42.7ರಷ್ಟು ವೃದ್ಧಿಗೊಳ್ಳುವ ನಿರೀಕ್ಷೆ ಇದೆ.

ಆಕ್ಸನ್ ಸ್ವಾಧೀನದಿಂದಾಗಿ, ಇನ್ಫೋಸಿಸ್ ಉನ್ನತ ದರ್ಜೆ ಗ್ರಾಹಕರನ್ನು(ಕ್ಲೈಂಟ್ಸ್)ಪಡೆಯಲು ಸಾಧ್ಯವಾಗುವುದರೊಂದಿಗೆ, ಸ್ಯಾಪ್ ವಲಯದಲ್ಲಿ ಕನ್ಸಲ್ಟನ್ಸಿ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಇನ್ಫೋಸಿಸ್ ಟೆಕ್ನಾಲಜಿಯ ಸಿಇಒ ವಿ.ಬಾಲಕೃಷ್ಣನ್ ಹೇಳಿದ್ದಾರೆ.

ಈ ವರ್ಷದ ನವೆಂಬರ್ ತಿಂಗಳ ಅಂತ್ಯದ ವೇಳೆ ಒಪ್ಪಂದವು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಇನ್ಫೋಸಿಸ್ ಎಂಡಿ ಗೋಪಾಲಕೃಷ್ಣನ್ ತಿಳಿಸಿದ್ದಾರೆ.
ಮತ್ತಷ್ಟು
ಭಾರ್ತಿ ಏರ್‌ಟೆಲ್‌ಗೆ ಅತಿಹೆಚ್ಚು ಗ್ರಾಹಕರು
ರಿಲಯನ್ಸ್‌ನಿಂದ ಜಾದೂ ರೀಚಾರ್ಜ್
ಟಾಟಾ ಮೋಟಾರ್ಸ್ ಕಾರ್ಯಕ್ಕೆ ಅಡ್ಡಿ
ಉದ್ದಿಮೆ ಡೀಸೆಲ್ ಬೆಲೆ 57 ರೂ.ಗೆ ಏರುವ ಸಂಭವ
ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ವೇತನ ಹೆಚ್ಚಳವನ್ನು ನುಂಗಿದ ಹಣದುಬ್ಬರ