ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
11ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕೆ ಒತ್ತು: ಪ್ರಧಾನಿ
ಹನ್ನೊಂದನೇ ಪಂಚವಾರ್ಷಿಕ ಯೋಜನೆಯು ಜ್ಞಾನ ಹೂಡಿಕಾ ಯೋಜನೆಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದು, ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡುವುದು ತನ್ನ ಸರಕಾರದ ಪ್ರಯತ್ನವಾಗಿದೆ ಎಂದಿದ್ದಾರೆ.

ಗುಹಾವಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಸಿಂಗ್, ವಿಶ್ವದಲ್ಲಿ ಭಾರತವು ಯುವ ರಾಷ್ಟ್ರವಾಗಿದ್ದು, ವೀಕ್ಷಕರ ಪ್ರಕಾರ 2022ರ ವೇಳೆಗೆ ಭಾರತವು 500 ದಶಲಕ್ಷ ನುರಿತ ವ್ಯಕ್ತಿಗಳನ್ನು ಹೊಂದುವ ಸಂಭಾವ್ಯತೆ ಇದೆ" ಎಂದರು.

ದೇಶಕ್ಕೆ ಉತ್ತಮ ಅವಕಾಶಗಳು ಶಿಕ್ಷಣ ಕ್ರಾಂತಿಯಿಂದ ಬರುತ್ತಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಅಭಿವೃದ್ಧಿಗೆ ಹೆಚ್ಚು ಶ್ರಮಪಡಬೇಕಾಗಿದೆ ಎಂದು ಹೇಳಿದರು.

ಸರ್ವ ಶಿಕ್ಷಾ ಅಭಿಯಾನದ ಮೂಲಕ ಗುಣಮಟ್ಟ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಲು ಸರಕಾರವು ಪ್ರಯತ್ನಿಸುತ್ತಿದ್ದು, ಪ್ರೌಢ ಶಾಲೆಯ ವೃದ್ಧಿಯು ಈಗಾಗಲೇ ಪ್ರಾರಂಭಗೊಂಡಿದೆ ಎಂದು ನುಡಿದರು.

ಉನ್ನತ ಶಿಕ್ಷಣದಲ್ಲಿ ಎಂಟು ಐಐಟಿಗಳನ್ನು, ಏಳು ಐಐಎಂ, 16 ಕೇಂದ್ರ ವಿಶ್ವವಿದ್ಯಾಲಯಸ 14 ವಿಶ್ವ ಮಟ್ಟ ವಿಶ್ವವಿದ್ಯಾಲಯ ಮತ್ತು ಐದು ನೂತನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ರಿಸರ್ಚ್‌ನ್ನು ಸರಕಾರವು ಪ್ರಾರಂಭಿಸಲಿರುವುದಾಗಿ ಸಿಂಗ್ ಇದೇ ವೇಳೆ ತಿಳಿಸಿದರು.

ಅಲ್ಲದೆ, ದೇಶದಲ್ಲಿನ ಶಿಕ್ಷಣ ಅಭಿವೃದ್ಧಿಗಾಗಿ ವಿವಿಧ ಯೋಜನೆ ಮತ್ತು ಗುರಿಗಳನ್ನು ಪೂರ್ಣಗೊಳಿಸಲು ಸರಕಾರವು ಬದ್ಧವಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಮತ್ತಷ್ಟು
ಸಿಂಗೂರ್ ವಿವಾದ: ಜಮೀನು ಹಿಂತಿರುಗಿಸಲು ನಕಾರ
ಆಕ್ಸನ್ ಖರೀದಿಗೆ ಮುಂದಾದ ಇನ್ಫೋಸಿಸ್
ಭಾರ್ತಿ ಏರ್‌ಟೆಲ್‌ಗೆ ಅತಿಹೆಚ್ಚು ಗ್ರಾಹಕರು
ರಿಲಯನ್ಸ್‌ನಿಂದ ಜಾದೂ ರೀಚಾರ್ಜ್
ಟಾಟಾ ಮೋಟಾರ್ಸ್ ಕಾರ್ಯಕ್ಕೆ ಅಡ್ಡಿ
ಉದ್ದಿಮೆ ಡೀಸೆಲ್ ಬೆಲೆ 57 ರೂ.ಗೆ ಏರುವ ಸಂಭವ