ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದಲ್ಲಿ ನ್ಯಾನೋ ಸ್ಥಾಪಿಸಲು ದೇಶಪಾಂಡೆ ಆಗ್ರಹ
ರಾಜ್ಯದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಲಿ ಎಂದು ಸಲಹೆ ನೀಡಿರುವ ಕೈಗಾರಿಕಾ ಮಾಜಿ ಸಚಿವ ಆರ್.ವಿ.ದೇಶಪಾಂಡೆ , ಟಾಟಾ ಸಂಸ್ಥೆ ರಾಜ್ಯದಲ್ಲಿ ಘಟಕ ಸ್ಥಾಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಅನುಕೂಲಕರ ವಾತಾವರಣ ಇಲ್ಲದಿದ್ದರಿಂದ ಬೇರೆ ರಾಜ್ಯಗಳಲ್ಲಿ ಘಟಕ ತೆರೆಯಲು ರತನ್ ಟಾಟಾ ಚಿಂತನೆ ನಡೆಸಿದ್ದಾರೆ.

ಧಾರವಾಡದ ಬಳಿ ಟಾಟಾ ಸಂಸ್ಥೆಯ 600 ಎಕರೆ ಭೂಮಿ ಇದೆ. ರಾಜ್ಯದಲ್ಲಿ ಟಾಟಾ ಘಟಕ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿಗಳು ಆಹ್ವಾನ ನೀಡುವ ವಿಚಾರವನ್ನೇ ಮಾಡಿಲ್ಲ ಎಂದು ದೇಶಪಾಂಡೆ ಆರೋಪಿಸಿದ್ದಾರೆ.

ಟಾಟಾ ನ್ಯಾನೊ ಕಾರು ಉತ್ಪಾದನೆಗೆ ಮಹಾರಾಷ್ಟ್ರ,ಒರಿಸ್ಸಾ,ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ರತನ್ ಟಾಟಾ ಅವರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಲು ಸಿದ್ದರಾ ಗಿದ್ದರೆ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆ ಕೆಲಸ ಮಾಡದೆ ಶಾಸಕರನ್ನು ಸೆಳೆಯುವ ಕಾರ್ಯದಲ್ಲಿ ಮಗ್ನರಾಗಿರುವುದು ದುರಂತ ಎಂದು ದೇಶಪಾಂಡೆ ಟೀಕಿಸಿದ್ದಾರೆ.
ಮತ್ತಷ್ಟು
ಗ್ರಾಮೀಣ ಪ್ರದೇಶದತ್ತ ಎಚ್‌ಡಿಎಫ್‌ಸಿ ಚಿತ್ತ
11ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕೆ ಒತ್ತು: ಪ್ರಧಾನಿ
ಸಿಂಗೂರ್ ವಿವಾದ: ಜಮೀನು ಹಿಂತಿರುಗಿಸಲು ನಕಾರ
ಆಕ್ಸನ್ ಖರೀದಿಗೆ ಮುಂದಾದ ಇನ್ಫೋಸಿಸ್
ಭಾರ್ತಿ ಏರ್‌ಟೆಲ್‌ಗೆ ಅತಿಹೆಚ್ಚು ಗ್ರಾಹಕರು
ರಿಲಯನ್ಸ್‌ನಿಂದ ಜಾದೂ ರೀಚಾರ್ಜ್