ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಬ್ಬಿಣದ ಅದಿರು ರಫ್ತು ಸುಂಕ ಹೆಚ್ಚಳಕ್ಕೆ ಒತ್ತಾಯ
ದೇಶೀಯ ಸ್ಟೀಲ್ ಉತ್ಪಾದಕರಿಗೆ ಪೂರೈಕೆ ಭದ್ರತೆಯನ್ನು ಒದಗಿಸಲು ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕಬ್ಬಿಣದ ಅದಿರಿನ ಮೇಲಿನ ರಫ್ತು ಸುಂಕವನ್ನು ಶೇ.15ರಿಂದ ಶೇ.35ಕ್ಕೆ ಏರಿಸುವಂತೆ ವಾಣಿಜ್ಯ ಮಂಡಳಿ ಅಸೋಚಂ ಸರಕಾರವನ್ನು ಕೋರಿದೆ.

ಈ ಕುರಿತಾಗಿ ಹಣಕಾಸು ಸಚಿವಾಲಯ ಮತ್ತು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯಕ್ಕೆ ಈಗಾಗಲೇ ಪತ್ರ ಬರೆಯಲಾಗಿದ್ದು, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಮತ್ತು ದೇಶೀಯ ಸ್ಟೀಲ್ ಕಂಪನಿಗಳ ಅಭಿವೃದ್ಧಿಗಾಗಿ ರಫ್ತು ಸುಂಕವನ್ನು ಏರಿಸುವಂತೆ ಮನವಿ ಮಾಡಲಾಗಿದೆ ಎಂದು ಅಸೋಚಂ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ತಿಳಿಸಿದ್ದಾರೆ.

ಸ್ಟೀಲ್ ಉತ್ಪಾದನೆಯ ಪ್ರಮುಖ ಕಚ್ಚಾವಸ್ತುಗಳಾದ ಕೋಕ್ ಮತ್ತು ಕೋಕಿಂಗ್ ಕೋಲ್‌ನ ರಫ್ತು ಸುಂಕವನ್ನು ಚೀನಾವು ಇತ್ತೀಚೆಗೆ ಹೆಚ್ಚುಗೊಳಿಸಿತ್ತು.

ರಫ್ತಿನ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಚೀನಾ ಕೈಗೊಂಡ ಕ್ರಮವನ್ನೇ ಭಾರತವೂ ಕೈಗೊಳ್ಳಬೇಕು. ಇದು ಚೀನಾ ಮೇಲಿನ ಪ್ರತೀಕಾರಕ್ಕೆ ಸಂಬಂಧಿಸಿದ ಕ್ರಮವಲ್ಲ ಎಂದು ಅವರು ಹೇಳಿದ್ದಾರೆ.

ಕಬ್ಬಿಣದ ಅದಿರು ರಫ್ತಿಗೆ ಉತ್ತೇಜನ ನೀಡದೇ ಇರುವುದರಿಂದ, ಸ್ಟೀಲ್ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳವನ್ನು ಕಾಣಬಹುದಾಗಿದೆ. ಅಲ್ಲದೆ, ಸಂಪೂರ್ಣ ಉತ್ಪಾದನಾ ಕ್ಷೇತ್ರಕ್ಕೆ ಇದರಿಂದ ಲಾಭವಿದೆ ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ನ್ಯಾನೋ ಯೋಜನೆ ಸ್ಥಗಿತಗೊಳ್ಳಲಿ: ಬ್ಯಾನರ್ಜಿ
ರಾಜ್ಯದಲ್ಲಿ ನ್ಯಾನೋ ಸ್ಥಾಪಿಸಲು ದೇಶಪಾಂಡೆ ಆಗ್ರಹ
ಗ್ರಾಮೀಣ ಪ್ರದೇಶದತ್ತ ಎಚ್‌ಡಿಎಫ್‌ಸಿ ಚಿತ್ತ
11ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕೆ ಒತ್ತು: ಪ್ರಧಾನಿ
ಸಿಂಗೂರ್ ವಿವಾದ: ಜಮೀನು ಹಿಂತಿರುಗಿಸಲು ನಕಾರ
ಆಕ್ಸನ್ ಖರೀದಿಗೆ ಮುಂದಾದ ಇನ್ಫೋಸಿಸ್