ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್‌ಗಳಿಗೆ ಸರಕಾರದಿಂದ 25,000 ಕೋಟಿ ರೂ.
ರೈತರ ಸಾಲ ಮನ್ನಾ ಯೋಜನೆಯಿಂದಾಗಿ ಬ್ಯಾಂಕುಗಳಿಗೆ ಉಂಟಾಗಿದ್ದ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ, ಸರಕಾರವು ಬ್ಯಾಂಕುಗಳಿಗೆ 25,000 ಕೋಟಿ ರೂಪಾಯಿಗಳನ್ನು ನೀಡಲಿದೆ ಎಂದು ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಸಾಲ ಮನ್ನಾ ಯೋಜನೆಯಿಂದಾಗಿ ಬ್ಯಾಂಕ್‌ಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಇದಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ 250 ಶತಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅರುಣ್ ರಾಮನಾಥನ್ ತಿಳಿಸಿದ್ದಾರೆ.

ಮಾರ್ಚ್ ಒಂದರ ಬಡ್ಡಿದರದ ಆಧಾರದಲ್ಲಿ ಹಣಕ ಪಾವತಿ ಮಾಡಬೇಕು ಎಂಬ ಬ್ಯಾಂಕುಗಳ ಸಲಹೆಯ ಬಗ್ಗೆ ಸರಕಾರವು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಅವರು ದೇಶೀಯ ಗ್ರಾಮೀಣ ಬ್ಯಾಂಕ್(ಆರ್ಆರ್‌ಬಿ)ಗಳ ನಿರ್ವಹಣೆಯ ವಿಮರ್ಷೆ ನಡೆಸಿದ ನಂತರ ರಾಮನಾಥನ್ ಹೇಳಿದ್ದಾರೆ.

ಬ್ಯಾಂಕ್ ನೌಕರರಿಗೆ ಉತ್ತಮ ತರಬೇತಿಯನ್ನು ನೀಡಲು ಮತ್ತು ಆರ್ಆರ್‌ಬಿ ಬ್ಯಾಂಕುಗಳನ್ನು ಕಂಪ್ಯೂಟರೀಕರಣಗೊಳಿಸಲು ಪ್ರಾಧಾನ್ಯ ನೀಡುವಂತೆ ಚಿದಂಬರಂ ವಿಮರ್ಷೆಯ ವೇಳೆ ಹೇಳಿರುವುದಾಗಿ ರಾಮನಾಥನ್ ತಿಳಿಸಿದರು.
ಮತ್ತಷ್ಟು
ಬಿಎಸ್ಎನ್ಎಲ್‌ನಿಂದ ನೂತನ ಬಿಲ್ಲಿಂಗ್ ವಿಧಾನ
ಕಬ್ಬಿಣದ ಅದಿರು ರಫ್ತು ಸುಂಕ ಹೆಚ್ಚಳಕ್ಕೆ ಒತ್ತಾಯ
ನ್ಯಾನೋ ಯೋಜನೆ ಸ್ಥಗಿತಗೊಳ್ಳಲಿ: ಬ್ಯಾನರ್ಜಿ
ರಾಜ್ಯದಲ್ಲಿ ನ್ಯಾನೋ ಸ್ಥಾಪಿಸಲು ದೇಶಪಾಂಡೆ ಆಗ್ರಹ
ಗ್ರಾಮೀಣ ಪ್ರದೇಶದತ್ತ ಎಚ್‌ಡಿಎಫ್‌ಸಿ ಚಿತ್ತ
11ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕೆ ಒತ್ತು: ಪ್ರಧಾನಿ