ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಕಿಯಾ, ಎಲ್‌ಜಿಯಿಂದ ನೂತನ ಮೊಬೈಲ್ ಫೋನ್
ಮೊಬೈಲ್ ಮಾರುಕಟ್ಟೆ ಪ್ರತಿಸ್ಪರ್ಧಿಗಳಾದ ಆಪಲ್, ಸ್ಯಾಮ್‌ಸಂಗ್‌ಗಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಪ್ರಮುಖ ಮೊಬೈಲ್ ಕಂಪನಿಗಳಾದ ನೋಕಿಯಾ ಮತ್ತು ಎಲ್‌ಜಿ ನೂತನ ಮೆಗಾಪಿಕ್ಸೆಲ್ ಮೊಬೈಲ್ ಫೋನ್‌ಗಳನ್ನು ಅನಾವರಣಗೊಳಿಸಿದೆ.

ನೋಕಿಯಾದ ನೂತನ ಮಾಡೆಲ್‌ಗಳಾದ ಎನ್79 ಮತ್ತು ಎನ್85 5 ಮೆಗಾಪಿಕ್ಸೆಲ್ ಕ್ಯಾಮರಾ ಮತ್ತು ಪ್ರೀಲೋಡೆಡ್ ಗೇಮ್ಸ್‌ಗಳನ್ನು ಹೊಂದಿದೆ.

ಎಲ್‌ಜಿಯ ಕೆಸಿ910 ಟಚ್‌ಸ್ಕ್ರೀನ್ ಹ್ಯಾಂಡ್‌ಸೆಟ್ ಸ್ಲಿಂ ಟಚ್ ಕ್ಯಾಮರಾ ಫೋನ್ ಆಗಿದ್ದು, 7.2 ಎಂಬಿಪಿ ವೇಗದ ಎಚ್ಎಸ್‌ಡಿಪಿಎ, ಬ್ಲೂಟೂತ್, 8 ಜಿಬಿ ಎಕ್ಸ್ಟರ್ನಲ್ ಮೆಮರಿ ಮುಂತಾದ ಅನೇಕ ಸೌಲಭ್ಯಗಳನ್ನು ಹೊಂದಿದೆ.

ನೋಕಿಯಾ ಎನ್85 ಮೊಬೈಲ್ ಬೆಲೆಯು 450 ಯೂರೋ ಮತ್ತು ಎನ್‌79 ಬೆಲೆಯು 350 ಯೂರೋಗಳಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ.

ಎಲ್‌ಜಿಯು ಕೂಡಾ ತನ್ನ ನೂತನ ಟಚ್‌ಸ್ಕ್ರೀನ್ ಮೊಬೈಲ್‌ನ್ನು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದ್ದು, ಆದರೆ, ಬೆಲೆಯನ್ನು ಇನ್ನೂ ಬಹಿರಂಗಗೊಳಿಸಿಲ್ಲ.
ಮತ್ತಷ್ಟು
ಬ್ಯಾಂಕ್‌ಗಳಿಗೆ ಸರಕಾರದಿಂದ 25,000 ಕೋಟಿ ರೂ.
ಬಿಎಸ್ಎನ್ಎಲ್‌ನಿಂದ ನೂತನ ಬಿಲ್ಲಿಂಗ್ ವಿಧಾನ
ಕಬ್ಬಿಣದ ಅದಿರು ರಫ್ತು ಸುಂಕ ಹೆಚ್ಚಳಕ್ಕೆ ಒತ್ತಾಯ
ನ್ಯಾನೋ ಯೋಜನೆ ಸ್ಥಗಿತಗೊಳ್ಳಲಿ: ಬ್ಯಾನರ್ಜಿ
ರಾಜ್ಯದಲ್ಲಿ ನ್ಯಾನೋ ಸ್ಥಾಪಿಸಲು ದೇಶಪಾಂಡೆ ಆಗ್ರಹ
ಗ್ರಾಮೀಣ ಪ್ರದೇಶದತ್ತ ಎಚ್‌ಡಿಎಫ್‌ಸಿ ಚಿತ್ತ