ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನ್ಯಾನೋ'- ಟಾಟಾಗೆ ಕರ್ನಾಟಕ ಆಹ್ವಾನ
ಕರ್ನಾಟಕದಲ್ಲಿ ಟಾಟಾ ನ್ಯಾನೋ ಕಾರು ಘಟಕ ಸ್ಥಾಪನೆಗೆ ಅವಕಾಶ ಮಾಡಿಕೊಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಬುಧವಾರ ಒಪ್ಪಿಗೆ ನೀಡಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ, ಹಿಂಸಾಚಾರ ನಿರಂತರವಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ ರತನ್ ಟಾಟಾ ನ್ಯಾನೋ ಘಟಕವನ್ನು ಸ್ಥಳಾಂತರಿಸುವ ಯೋಚನೆಯಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸೇರಿದಂತೆ ರಾಜ್ಯದ ಹಲವು ಮುಖಂಡರು ಕರ್ನಾಟಕದಲ್ಲಿ ಈ ಘಟಕ ಸ್ಥಾಪನೆಗೆ ಆಹ್ವಾನ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದರು.

ಇದೇ ಸಂದರ್ಭದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇದಕ್ಕೂ ಮೊದಲು ರೈತರಿಗೆ ಕಡ್ಡಾಯ ಮೀಟರ್ ಅಳವಡಿಸುವ ಕಾರ್ಯ ನಡೆಯಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಮತ್ತಷ್ಟು
ನೋಕಿಯಾ, ಎಲ್‌ಜಿಯಿಂದ ನೂತನ ಮೊಬೈಲ್ ಫೋನ್
ಬ್ಯಾಂಕ್‌ಗಳಿಗೆ ಸರಕಾರದಿಂದ 25,000 ಕೋಟಿ ರೂ.
ಬಿಎಸ್ಎನ್ಎಲ್‌ನಿಂದ ನೂತನ ಬಿಲ್ಲಿಂಗ್ ವಿಧಾನ
ಕಬ್ಬಿಣದ ಅದಿರು ರಫ್ತು ಸುಂಕ ಹೆಚ್ಚಳಕ್ಕೆ ಒತ್ತಾಯ
ನ್ಯಾನೋ ಯೋಜನೆ ಸ್ಥಗಿತಗೊಳ್ಳಲಿ: ಬ್ಯಾನರ್ಜಿ
ರಾಜ್ಯದಲ್ಲಿ ನ್ಯಾನೋ ಸ್ಥಾಪಿಸಲು ದೇಶಪಾಂಡೆ ಆಗ್ರಹ