ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಿಲರಿ ಹಿಂದಿಕ್ಕಿದ ಸೋನಿಯಾ
PTI
ಜರ್ಮನ್ ಚಾನ್ಸ್‌ಲರ್ ಏಂಜೆಲಾ ಮಾರ್ಕೆಲ್ ಜಗತ್ತಿನ ಅತಿ ಪ್ರಭಾವಿ ನಾಯಕಿ ಎಂಬುದಾಗಿ, ವೃತ್ತಿ, ಆರ್ಥಿಕ ಪ್ರಭಾವ ಮತ್ತು ಮಾಧ್ಯಮ ಪ್ರಚಾರವನ್ನು ಆಧರಿಸಿ ಫೋರ್ಬ್ಸ್ ಪತ್ರಿಕೆಯು ವಿಶ್ವದ ಅತಿ ಪ್ರಭಾವಿ ಮಹಿಳೆ ಪಟ್ಟಿಯಲ್ಲಿ ತಿಳಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಈ ಪಟ್ಟಿಯಲ್ಲಿ 21ನೇ ಸ್ಥಾನವನ್ನು ಪಡೆದುಕೊಂಡಿದ್ದು, ಅಮೆರಿಕ ಫೆಡರಲ್ ಡೆಪೋಸಿಟ್ ಇನ್ಶೂರೆನ್ಸ್ ಕಾರ್ಪ್‌ನ ಮುಖ್ಯಸ್ಥೆ ಶೀಲಾ ಬೇರ್ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸೋನಿಯಾ, ಅಮೆರಿಕ ಅಧ್ಯಕ್ಷ ಪದಾಕಾಂಕ್ಷಿಯಾಗಿದ್ದ ಹಿಲರಿಯನ್ನು ಹಿಮ್ಮೆಟ್ಟಿಸಿದ್ದಾರೆ.

ಅದಾಗ್ಯೂ, ಕಳೆದ ವರ್ಷ ಏಳನೇ ಸ್ಥಾನದಲ್ಲಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಹತ್ತನೇ ಸ್ಥಾನಕ್ಕಿಳಿದಿದ್ದಾರೆ.

54 ಉದ್ಯಮಿಗಳು, 23 ರಾಜಕೀಯ ನಾಯಕಿಯರು ಈ ನೂರು ಮಂದಿಯ ಪಟ್ಟಿಯಲ್ಲಿದ್ದು, ಶೇ.45ರಷ್ಟು ಮಂದಿ ಅಮೆರಿಕದ ಹೊರಭಾಗದವರಾಗಿದ್ದಾರೆ. ಮತ್ತು ಮೂರನೇ ಒಂದಂಶದಷ್ಟು ಮಹಿಳೆಯರ ಹೆಸರು ಪಟ್ಟಿಯಲ್ಲಿ ನೂತನವಾಗಿ ಸೇರ್ಪಡೆಗೊಂಡಿದೆ ಎಂದು ಫೋರ್ಬ್ಸ್ ಸಂಪಾದಕರು ತಿಳಿಸಿದ್ದಾರೆ.
ಮತ್ತಷ್ಟು
ನ್ಯಾನೋಗೆ ಮುಖೇಶ್ ಅಂಬಾನಿ ಬೆಂಬಲ
'ನ್ಯಾನೋ'- ಟಾಟಾಗೆ ಕರ್ನಾಟಕ ಆಹ್ವಾನ
ನೋಕಿಯಾ, ಎಲ್‌ಜಿಯಿಂದ ನೂತನ ಮೊಬೈಲ್ ಫೋನ್
ಬ್ಯಾಂಕ್‌ಗಳಿಗೆ ಸರಕಾರದಿಂದ 25,000 ಕೋಟಿ ರೂ.
ಬಿಎಸ್ಎನ್ಎಲ್‌ನಿಂದ ನೂತನ ಬಿಲ್ಲಿಂಗ್ ವಿಧಾನ
ಕಬ್ಬಿಣದ ಅದಿರು ರಫ್ತು ಸುಂಕ ಹೆಚ್ಚಳಕ್ಕೆ ಒತ್ತಾಯ